For the best experience, open
https://m.justkannada.in
on your mobile browser.

ಕುಮಾರಸ್ವಾಮಿ always ಹಿಟ್ ಅಂಡ್ ರನ್ ಕೇಸ್ : ಸಿಎಂ ಸಿದ್ದರಾಮಯ್ಯ.

01:10 PM May 14, 2024 IST | prashanth
ಕುಮಾರಸ್ವಾಮಿ always ಹಿಟ್ ಅಂಡ್ ರನ್ ಕೇಸ್   ಸಿಎಂ ಸಿದ್ದರಾಮಯ್ಯ

ಮೈಸೂರು,ಮೇ,14,2024 (www.justkannada.in): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಳಿಯಿರುವ ಪೆನ್ ಡ್ರೈವ್ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಅಲ್ ವೇಸ್ ಹಿಟ್ ಅಂಡ್ ರನ್ ಕೇಸ್. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಟಾಂಗ್ ಕೊಟ್ಟರು.

ಬೆಂಗಳೂರಿನಿಂದ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಸಚಿವರಾದ ಮಹದೇವಪ್ಪ,  ಮಧು ಬಂಗಾರಪ್ಪ, ಚಲುವರಾಯಸ್ವಾಮಿ,  ವೆಂಕಟೇಶ್, ಶಾಸಕರಾದ ಹರೀಶ್ ಗೌಡ, ರವಿಶಂಕರ್, ಇನ್ನಿತರರು ಸಾಥ್ ನೀಡಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪರಿಷತ್ ಚುನಾವಣೆ ವಾತಾವರಣ ಚೆನ್ನಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಅಭ್ಯರ್ಥಿಗಳಿಗೆ ಮತದಾರರ ಭೇಟಿ ಮಾಡಲಿಕ್ಕೆ ಸಾಕಷ್ಟು ಸಮಯ ಸಿಕ್ಕಿದೆ. ಪೆನ್ ಡ್ರೈವ್ ಪ್ರಕರಣಕ್ಕೂ ಈ ಚುನಾವಣೆಗೆ ಸಂಬಂಧ ಇಲ್ಲ. ಎಲ್ಲ ಮತದಾರರ ವಿದ್ಯಾವಂತರಿದ್ದಾರೆ. ಯಾರನ್ನ ಆಯ್ಕೆ ಮಾಡಬೇಕು ಎಂಬ ಅರಿವು ಅವರಿಗಿದೆ ಹಾಗಾಗಿ ಪರಿಷತ್ ಚುನಾವಣೆಗೆ ಪೆನ್ ಡ್ರೈವ್ ಪ್ರಕರಣ ಯಾವುದೇ ಪರಿಣಾಮ ಬೀರಲ್ಲ ಎಂದರು.

ಸರ್ಕಾರ ಪತನವಾಗುತ್ತೆ ಎಂಬ ಹೇಳಿಕೆ  ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರ ಪತನದ ಬಗ್ಗೆ ಒಂದು ವರ್ಷದಿಂದ ಹೇಳುತ್ತಿದ್ದಾರೆ‌. ಮಹಾರಾಷ್ಟ್ರ ಸಿಎಂ‌ ತಮ್ಮ ಸರ್ಕಾರವನ್ನ ಮೊದಲು ಉಳಿಸಿಕೊಳ್ಳಲಿ. ನಮ್ಮಲ್ಲಿ ಒಳಜಗಳ ಇಲ್ಲ. ಒಳಗೂ ಇಲ್ಲ, ಹೊರಗೂ ಇಲ್ಲ. ಜಗಳ ಇದ್ದರೇ ತಾನೇ ಬೀಳುವುದು. ಜಗಳ ಇದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಈ ರೀತಿ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿತ್ತಾ.? ಎಂದು ಪ್ರಶ್ನಿಸಿದರು.

ಬೇರೆ ರಾಜ್ಯಕ್ಕೆ ಪ್ರಚಾರಕ್ಕೆ ಹೋಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಬೇರೆ ರಾಜ್ಯಕ್ಕೆ ಪ್ರಚಾರದ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ನಾನು ಸಾಮನ್ಯವಾಗಿ ಯಾವಗಲೂ ಪ್ರಚಾರಕ್ಕೆ ಬೇರೆ ರಾಜ್ಯಗಳಿಗೆ ಹೋಗಿಲ್ಲ. ಈ ಬಾರಿ ಸ್ಟಾರ್ ಪ್ರಚಾರಕ್ಕೆ ಕರೆದಿದ್ದಾರೆ. ಇಲ್ಲಿಯೇ ಬೇರೆ ಕೆಲಸಗಳಿದ್ದಾವೆ.  ನೋಡೊಣಾ ಬಿಡಿ ಎಂದರು.

Key words: Kumaraswamy, hit and run case, CM Siddaramaiah

Tags :

.