For the best experience, open
https://m.justkannada.in
on your mobile browser.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ.

01:24 PM May 17, 2024 IST | prashanth
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ  ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ

ಹುಬ್ಬಳ್ಳಿ,ಮೇ,17,2024 (www.justkannada.in): ಹುಬ್ಬಳ್ಳಿಯಲ್ಲಿ ದುಷ್ಕರ್ಮಿ ಮನೆಗೆ ನುಗ್ಗಿ ಅಂಜಲಿ ಎಂಬ ಯುವತಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಹಾಗೂ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂರ್ಪೂರ್ಣ ಕುಸಿದಿದೆ.  ಜನರ ನೆಮ್ಮದಿಯನ್ನ ಸರ್ಕಾರ ಕೆಡಿಸಿದೆ. ಘಟನ ಸ್ಥಳಕ್ಕೆ ಗೃಹ ಸಚಿವರು ಯಾಕೆ.  ಪೊಲೀಸರನ್ನ ಅಮಾನತು  ಮಾಡುವ ನಾಟಕವನ್ನ ಬಿಡಿ ಎಂದು ಕಿಡಿಕಾರಿದರು.

Key words: Law and order - state - collapsed- Jagadish Shettar

Tags :

.