For the best experience, open
https://m.justkannada.in
on your mobile browser.

25 ರಂದು ಕಾನೂನು ವಿವಿ ಕುಲಪತಿ ಪ್ರೊ.ಸಿ. ಬಸವರಾಜುಗೆ ಅಭಿನಂದನೆ

07:03 PM May 23, 2024 IST | mahesh
25 ರಂದು ಕಾನೂನು ವಿವಿ ಕುಲಪತಿ ಪ್ರೊ ಸಿ  ಬಸವರಾಜುಗೆ ಅಭಿನಂದನೆ

ಮೈಸೂರು, ಮೇ.23, 2024: (www.justkannada.in news )ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸಿ. ಬಸವರಾಜು ಅವರ ಅಭಿನಂದನಾ ಸಮಾರಂಭ ಮಾನಸ ಗಂಗೋತ್ರಿಯ ಸೆನೆಟ್‌ ಭವನದಲ್ಲಿ ಮೇ 25ರ ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಭಿನಂದಿಸುವರು.

ಮುಖ್ಯಅತಿಥಿಗಳಾಗಿ ಸಾಹಿತಿ ಪ್ರೊ. ಪ್ರಧಾನ ಗುರುದತ್ತ,  ಸಮಾಜ ಸೇವಕ ಮ. ವೆಂಕಟರಾಮ್, ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್. ರಂಗಪ್ಪ, ಪ್ರೊ.ಕೆ.ಆರ್. ವೇಣುಗೋಪಾಲ್, ಪ್ರೊ.ವಿ. ವಿಜಯಕುಮಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್  ಭಾಗವಹಿಸುವರು. ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಅಧ್ಯಕ್ಷತೆ ವಹಿಸುವರು ಎಂದು ಅಭಿನಂದನಾ ಸಮಿತಿಯ  ಅಧ್ಯಕ್ಷ ಪ್ರೊ.ಎಂ.ಎಸ್. ಬೆಂಜಮಿನ್, ಗೌರವಾಧ್ಯಕ್ಷ ಡಾ.ಕೆ.ಬಿ. ಕೆಂಪೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರೊ.ಎನ್. ಸತೀಶ್ಗೌಡ ತಿಳಿಸಿದ್ದಾರೆ.

ಪ್ರೊ.ಸಿ. ಬಸವರಾಜು ಅವರು ಕಾನೂನು ವಿವಿ ಕುಲಪತಿಯಾಗಿ ಮುಂದುವರೆದಿದ್ದು, ಮೈವಿವಿ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿ ಆಗುತ್ತಿರುವುದರಿಂದ ಈ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

        ಪ್ರೊ.ಬಸವರಾಜು ಪರಿಚಯ

ಮೈಸೂರಿನ ಅಶೋಕಪುರಂನ ಬಡಕುಟುಂಬಕ್ಕೆ ಸೇರಿದ ಸಿ. ಚಿಕ್ಕಬಸವಯ್ಯ ಹಾಗೂ ಡಿ. ಜಯಮ್ಮ ಅವರ ಪುತ್ರರಾಗಿ 1962 ರ ಮೇ 15 ರಂದು ಜನಿಸಿದ ಪ್ರೊ.ಬಸವರಾಜು ಅವರು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ, ಮೈಸೂರು ವಿವಿಯಿಂದ ಚಿನ್ನದ ಪದಕದೊಂದಿಗೆ ಬಿ.ಎ ಪಡೆದರು. ನಂತರ ಆಂಗ್ಲ ಸಾಹಿತ್ಯದಲ್ಲಿ ಎಂ.ಎ, ಎಲ್ಎಲ್ಬಿ, ಎಲ್ಎಲ್ಎಂ [ಸಂವಿಧಾನ ಕಾನೂನು] ಹಾಗೂ ಪಿಎಚ್.ಡಿ [ಸಾಮಾಜಿಕ ನ್ಯಾಯ] ಪಡೆದರು.

ಬೆಂಗಳೂರು ರಾಷ್ಟ್ರೀಯ  ಕಾನೂನು ಶಾಲೆಯಲ್ಲಿ ಕಾನೂನು ಬೋಧನಾ ವೃತ್ತಿ ಆರಂಭಿಸಿ, ನಂತರ ಕರ್ನಾಟಕ ವಿವಿಯಲ್ಲಿ ಸೇವೆ ಸಲ್ಲಿಸಿದರು. ನಂತರ ಮೈಸೂರು ವಿವಿ ಕಾನೂನು ವಿಭಾಗದ ಉಪನ್ಯಾಸಕ ಪ್ರವಾಚಕ, ಪ್ರಾಧ್ಯಾಪಕರಾದರು. ಕಾನೂನು ವಿಭಾಗದ ಮಖ್ಯಸ್ಥ, ಡೀನ್, ಶಿಕ್ಷಣ ಮಂಡಳಿ ಹಾಗೂ ಸಿಂಡಿಕೇಟ್ಸದಸ್ಯರಾದರು. ವಿವಿಯ ಹಲವಾರು ಶಾಸನಬದ್ಧ ಸಮಿತಿಗಳಲ್ಲಿ ಅಧ್ಯಕ್ಷರು ಹಾಗೂ ಸದಸ್ಯರಾಗಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಡಾ.ಗಂಗೂಬಾಯಿ ಹಾನಗಲ್ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಪರೀಕ್ಷಾಂಗ ಕುಲಸಚಿವರಾಗಿದ್ದರು.

ಮೈಸೂರು ವಿವಿ ಶತಮಾನೋತ್ಸವ ಆಚರಿಸಿಕೊಂಡ ಸಂದರ್ಭದಲ್ಲಿ ಪ್ರೊ.ಬಸವರಾಜು ಕುಲಸಚಿವರಾಗಿದ್ದರು.  ನಂತರ ಪ್ರಭಾರ ಕುಲಪತಿಯೂ ಆಗಿದ್ದರು. ಪ್ರಸ್ತುತ ಕರ್ನಾಟಕ ಕಾನೂನು ವಿವಿಯ ಕುಲಪತಿಗಳಾಗಿದ್ದಾರೆ.

ಸುಮಾರು 125ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಕಾನೂನು ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಪೋಲೆಂಡ್, ಚೀನಾ, ದುಬೈ, ಭೂತಾನ್, ಕೆನಡಾ ಸೇರಿದಂತೆ ಬೇರೆ ಬೇರೆ ಕಡೆ175ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹಲವಾರು ವಿಚಾರ ಸಂಕಿರಣ, ಕಾರ್ಯಾಗಾರಗಳಲ್ಲಿ ಮಂಡಿಸಿದ್ದಾರೆ.

ಇವರ ಮಾರ್ಗದರ್ಶನದಲ್ಲಿ 19 ಮಂದಿ ಪಿಎಚ್.ಡಿ ಪಡೆದಿದ್ದಾರೆ. ಅವರು ವಿವಿಧ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರು, ನ್ಯಾಯಾಧೀಶರು, ವಕೀಲರು ಹಾಗೂ ಸರ್ಕಾರಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಭಾರತ ಸಂವಿಧಾನ, ಬಯೋಟೆಕ್ನಾಲಜಿ ಮತ್ತು ಪೇಟೆಂಟ್ಕಾನೂನು, ಇಂಟಲೆಕ್ಶುವಲ್ಪ್ರಾಪರ್ಟಿ ರೈಟ್ಸ್ ಲಾ, ಭಾರತೀ.ಯ ಕಾನೂನು ಮತ್ತು ತೆರಿಗೆ ಕಾನೂನು ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.

ಇವರಿಗೆ ಡಾ.ದೇ.ಜವರೇಗೌಡ ಚಿನ್ನದ ಪದಕ, ಬೆಸ್ಟ್ಸಿಟಿಜನ್ಆಫ್ಇಂಡಿಯಾ ಪ್ರಶಸ್ತಿ, ಯಶಸ್ಸಿ ಸಾಧಕ ಪ್ರಶಸ್ತಿ, ರಾಜೀವ್ಗಾಂಧಿ ಎಕ್ಸಲೆನ್ಸ್ಪ್ರಶಸ್ತಿ, ನ್ಯಾಷನಲ್ಆರ್ಟಿಐ ಜಾಗೃತಿ ಪ್ರಶಸ್ತಿ ಮೊದಲಾದವು ದೊರೆತಿವೆ.

         ಕಾನೂನು ಶಾಲೆ ಆರಂಭ

ಸಮಾಜದ ಎಲ್ಲಾ ವರ್ಗದವರಿಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕಾನೂನು ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 2006 ರಲ್ಲಿ ಕಾನೂನು ಶಾಲೆ ಆರಂಭಿಸಿ, ಪ್ರತ್ಯೇಕ ಕಟ್ಟಡ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾನೂನು ಶಾಲೆಯ ಸಂಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ 600 ವಿದ್ಯಾರ್ಥಿಗಳಿದ್ದು, 30 ಮಂದಿ ಅತಿಥಿ ಬೋಧಕರಿದ್ದಾರೆ.

ಕರ್ನಾಟಕ ಕಾನೂನು ವಿವಿ ಕುಲಪತಿ ಜೊತೆಗೆ ರಾಜ್ಯ ಕಾನೂನು ಆಯೋಗದ ಪದನಿಮಿತ್ತ ಸದಸ್ಯರು, ಆಂಧ್ರಪ್ರದೇಶ ಕೇಂದ್ರೀಯ ವಿವಿಯ ಆಡಳಿತ ಮಂಡಳಿ ಸದಸ್ಯರು, ನ್ಯಾಕ್ಪೀರ್ಟೀಂ ಅಧ್ಯಕ್ಷ ಹಾಗೂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಎಲ್. ಹಂಸವೇಣಿ ಮೈಸೂರು ವಿವಿ ಕಂಪ್ಯೂಟರ್ಸೈನ್ಸ್ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಶಶಾಂಕ್ಬಿ. ರಾಜ್ಪುತ್ರ ಹಾಗೂ ಪ್ರಿಯಾಂಕ ಬಿ. ರಾಜ್ಪುತ್ರಿ ಇದ್ದಾರೆ.

key words:  On 25th, felicitation to, Law University, Vice Chancellor Prof. C. Basavaraj, at Mysore.

summary: 

Law University Vice Chancellor Prof. C. Basavaraju's felicitation ceremony will be held at Manasa Gangotri's Senate Hall on May 25 at 10.30 am. this farewell ceremony has been arranged as Basavaraju continues to be the vice chancellor of the Law University and is retiring from the profession of a professor at the UOM

Tags :

.