For the best experience, open
https://m.justkannada.in
on your mobile browser.

DARK WEB : ವಕೀಲೆ ಬೆತ್ತಲಾಗಿಸಿ 14  ಲಕ್ಷ ರೂ ದೋಚಿಸಿದ ಸೈಬರ್‌ ವಂಚಕರು

12:36 PM Apr 11, 2024 IST | mahesh
dark web   ವಕೀಲೆ ಬೆತ್ತಲಾಗಿಸಿ 14  ಲಕ್ಷ ರೂ ದೋಚಿಸಿದ ಸೈಬರ್‌ ವಂಚಕರು

ಬೆಂಗಳೂರು,ಏ.10, 2024 : (www.justkannada.in news )  ಸೈಬರ್‌ ವಂಚಕರು ಇದೀಗ ವಕೀಲರನ್ನು ಟಾರ್ಗೆಟ್‌ ಮಾಡುವ ಮೂಲಕ ವಂಚನೆಯ ಜಾಲ ವಿಸ್ತರಿಸುತ್ತಿದ್ದಾರೆ.  ಬೆಂಗಳೂರಿನ ವಕೀಲೆಯನ್ನು ಬೆದರಿಸಿ ಬೆತ್ತಲಾಗುವಂತೆ ಮಾಡಿ 14 ಲಕ್ಷ ರೂ. ದೋಚಿದ ಘಟನೆ ನಡೆದಿದೆ.

ವಕೀಲೆಯ ಬೆತ್ತಲೆ ವಿಡಿಯೋ ಬಳಸಿಕೊಂಡು, ಬ್ಲ್ಯಾಕ್ಮೇಲ್ ಮೂಲಕ ಮತ್ತೆ 10 ಲಕ್ಷ ರೂ ಸುಲಿಗೆ ಮಾಡಲು ನಡೆಸಿದ ಯತ್ನ ವಿಫಲವಾಗಿದೆ. ಕಾನೊನು ಹಾಗೂ ಸೈಬರ್ ವಂಚನೆ ಕುರಿತಾದ ತಿಳಿವಳಿಕೆಯಿದ್ದರೂ ಸ್ಕಾ ವಂಚಕರ ಜಾಲಕ್ಕೆ ಬಿದ್ದ ಮಹಿಳೆ ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.  29 ವರ್ಷದ ಈ ವಕೀಲೆ, ಎರಡು ದಿನಗಳ ಕಾಲ  ಅಕ್ಷರಶಃ  ಸೈಬರ್ ಒತ್ತೆಯಾಳಾಗಿದ್ದರು.

ಮುಂಬಯಿ ಸೈಬರ್ ಕ್ರೈಂ ತಂಡ ಅಥವಾ ಸಿಐಐ ಎಂದು ಹೇಳಿಕೊಂಡ ದುಷ್ಕರ್ಮಿಗಳ ತಂಡವು ಎರಡು ದಿನವಿಡೀ ಆಕೆಯನ್ನು ವಿಡಿಯೋ ಕ್ಯಾಮೆರಾ ಅಥವಾ ಮೈಕ್ರೋಫೋನ್ ಎದುರು ಇರುವಂತೆ ಮಾಡಿದೆ.

ಏನಿದು ಘಟನೆ : 

ಏಪ್ರಿಲ್ 3ರ ಬುಧವಾರ ಕರೆ ಮಾಡಿದ ವಂಚಕ, ಫೆಡ್ ಎಕ್ಸ್‌ ನಿಂದ ಮಾತನಾಡುತ್ತಿರುವುದು.  ನಿಮ್ಮ ಹೆಸರಿನಲ್ಲಿ ಮುಂಬಯಿಯಿಂದ ಥಾಯ್ಲೆಂಡ್ಗೆ ಕಳುಹಿಸಿದ್ದ ಪಾರ್ಸೆಲ್ ವಾಪಸ್ ಬಂದಿದೆ. ಅದರಲ್ಲಿ ಐದು ಪಾಸ್ಪೋರ್ಟ್, ಮೂರು ಕ್ರೆಡಿಟ್ ಕಾರ್ಡ್ಗಳು ಹಾಗೂ ನಿಷೇಧಿತ ಮಾದಕ ವಸ್ತು ಎಂಡಿಎಂಎ 160 ಮಾತ್ರೆಗಳಿವೆ ಎಂದು ತಿಳಿಸಿದ.

ಆ ಪಾರ್ಸೆಲ್ಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ವಕೀಲೆ ಪ್ರತಿ ಪ್ರತಿಕ್ರಿಯೆ ನೀಡಿದರು. ಆಗ ಪಾರ್ಸೆಲ್ ಕಂಪನಿ ಸೋಗಿನಲ್ಲಿ ಮಾತನಾಡಿದ ವಂಚಕರು ಮಹಿಳಾ ವಕೀಲೆಯನ್ನು ಮಾತಿನಲ್ಲಿ ಮರಳು ಮಾಡಿದರು.

ವಂಚಕರು ಕರೆಯನ್ನು ಸೈಬರ್ ಅಪರಾಧ  ತಂಡಕ್ಕೆ ವರ್ಗಾಯಿಸುವುದಾಗಿ ಯಾಮಾರಿಸಿ ವಿಡಿಯೋ ಕಾಲ್ಗೆ ಬರುವಂತೆ ವಕೀಲೆಗೆ ಸೂಚಿಸಿ . ಕ್ಯಾಮೆರಾ ಆನ್ ಮಾಡಿ ಮಾತನಾಡುವಂತೆ  ನಿರ್ದೇಶಿಸಿದ. ವಕೀಲೆ ಬಳಿ ಖಾತೆಯಲ್ಲಿರುವ ಹಣ, ಸಂಬಳ, ಹೂಡಿಕೆ ಸೇರಿದಂತೆ ಎಲ್ಲಾ ವಿವರಗಳನ್ನು ಕೇಳಿ ಬರೆದುಕೊಂಡ.

ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ಮಾಹಿತಿ ಹಿರಂಗಪಡಿಸುವುದಿಲ್ಲ ಎಂಬ ಪ್ರಶ ತೆಗೆಸಿಕೊಳ್ಳುವ ಗೌಪ್ಯತಾ ಪ್ರಮಾಣ ಓದುವಂತೆ ಸೂಚಿಸಿದ್ದ ಈ ಬಗ್ಗೆ ಕುಟುಂಬ ಅಥವಾ ಪೊಲೀಸರ ಬಳಿ ಮಾತನಾಡಬಹುದೇ ಎಂದು ಮಹಿಳೆ ಕೇಳಿದಾಗ, ನಿಮ್ಮ ಸುರಕ್ಷತೆ ದೃಷ್ಟಿಯಿಂದ ಬೇಡ ಎಂದು ಆತ ಹೇಳಿದ್ದ ಉದ್ಯೋಗಿಗಳ ವಿವರ ಬಳಸಿಕೊಂಡು ಭಾರತದ ಪ್ರಮುಖ ಬ್ಯಾಂಕ್ ಒಂದಕ್ಕೆ ಸೇರಿದವರು ಅಕ್ರಮ ಹಣ ವರ್ಗಾವಣೆ ಮತ್ತು ಮಾನವ ಕಳ್ಳಸಾಗಣೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಕಥೆಯನ್ನು ಆಕೆ ಬಳಿ ಹೇಳಿದ್ದ ಈ ಹೈ ಪ್ರೊಫೈಲ್ ಪ್ರಕರಣದಲ್ಲಿ ಪೊಲೀಸರು ಮತ್ತು ರಾಜಕಾರತಗಳು ಭಾಗಿಯಾಗಿದ್ದಾರೆ. ಅವರ ಜತೆ ವಕೀಠೆ ಸಹಕರಿಸಬೇಕು. ಈ ಬಗ್ಗೆ ಯಾರ ಬಳಿಯೂ ಮಾತನಾಡಬಾರದು ಎಂದು ಹೇಳಿದ್ದ.

ಇದಕ್ಕಾಗಿವಕೀಲೆ ಬುಧವಾರ ಇಡೀ ದಿನ ನಿಗಾದಲ್ಲಿರಬೇಕು ಹೀಗಾಗಿ ಆಕೆಯ ಕ್ಯಾಮೆರಾ ಆನ್ನಲ್ಲಿ ಇರಿಸಿ, ಸೀನ್ ಶೇರ್ ಮಾಡಬೇಕು. ವಕೀಲೆ ಯಾರಿಗಾದರೂ ಕರೆ ಮಾಡುವುದು ಅಥವಾ ಮೆಸೇಜ್ ಕಳುಹಿಸುತ್ತಿದ್ದೀನಾ ಎಂಬುದು ಗೊತ್ತಾಗಬೇಕುಎ೦ದು ಆತ ಹೇಳಿದ್ದ ಇಡೀ ಹಗಲು ಮತ್ತು ರಾತ್ರಿ ಆತ ವಕೀಲೆ ಮೇಲೆ ನಿಗಾ ಇರಿಸಿದ್ದ ವಕೀಲೆ ಕ್ಯಾಮೆರಾ ಆನ್ ಮಾಡಿಯೇ ಮಲಗಿದ್ದಾಗಿ ದೂರಿನಲ್ಲಿ ತಿಳಿದ್ದಾರೆ.

ಸಿಎಂ ಸಿದ್ದರಾಮಯ್ಯ ನಿಮಗೆ ಫೋನ್‌ ಮಾಡಿದ್ರ..?

ಮಾರನೆ ದಿನ, ವಕೀಲೆಯ ಖಾತೆಯಲ್ಲಿನ ಎಲ್ಲ ಹಣವನ್ನೂ “ಡಮ್ಮಿ' ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ ವಂಚಕರು,  ಬ್ಯಾ ಕ್ ಶಾಖೆಗೆ ಹೋಗಿ, ಅದೇ ಬ್ಯಾಂಕ್ನಲ್ಲಿದ್ದ ಮತ್ತೊಂದು ಖಾತೆಗೆ ವಕೀಲೆ 10.79 ಲಕ್ಷ ರೂ ಹಣವನ್ನು ವರ್ಗಾಯಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಇಡೀ ಪ್ರಕ್ರಿಯೆ ಉದ್ದಕ್ಕೂ ಆಕೆ ಕರೆಯನ್ನು ಕಟ್ ಮಾಡುವಂತೆ ಇರಲಿಲ್ಲ ಮತ್ತು ಆಕೆಯ ಫೋನ್ ಸ್ಟೀನ್ ಆತನಿಗೆ ಕಾಣುವಂತೆ ಇರಬೇಕಿತ್ತು. ಹಣ ವರ್ಗಾವಣೆಯಾದ ಬಳಿಕ, ಬಹುತೇಕ ವರ್ಗಾವಣೆಯನ್ನು ಪರಿಶೀಲಿಸಲಾಗಿದೆ. ಆದರೆ ಕ್ರೆಡಿಟ್ ಕಾರ್ಡ್ ವ್ಯವಹಾರಗಳಲ್ಲಿ ಕೆಲವು ಅವ್ಯವಹಾರ ಆಗಿದೆ. ಎಂದು ಹೇಳಿದ್ದ ಅದಕ್ಕಾಗಿ ಆಪ್ ಒಂದನ್ನು ಡೌನ್ಲೋಡ್ ಮಾಡಿಸಿದ್ದ. ಅದರಲ್ಲಿ 5 ಸಾವಿರ ಡಾಲರ್ (ಅಂದಾಜು4.16 ಲಕ್ಷ ರೂ) ಮೊತ್ತದ ಬಟ್ಕಾಯಿನ್ ಖರೀದಿಸಲು ವಂಚಕರು ಪ್ರಯತ್ನಿಸಿದ್ದರು. ಆದರೆ ಆ ವಹಿವಾಟು ವಿಫಲಗೊಂಡಿತ್ತು. ಬಳಕೆ ಮಿತಿಯನ್ನು ಬದಲಿಸುವಂತೆ ವಕೀಲೆಗೆ ಆತ ಸೊಚಿಸಿದ್ದ ಆದರೆ ಅದೆಲ್ಲವೂ ವಿಫಲವಾಗಿದ್ದವು. ಆಕೆಯ ಹೆಸರು ದುರ್ಬಳಕೆಯಾಗದಂತೆ ತಡೆಯಲು ಅದರ ಫೋಟೋಗಳನ್ನು ಕಳುಹಿಸುವಂತೆ ಹೇಳಿದ್ದ ಗುರುವಾರ ಮುಂಜಾನೆ ಶಾಪಿಂಗ್ ತಾಣವೊಂದರಿಂದ 2.04.ಲಕ್ಷ ರೂ ಮತ್ತು 173 ಲಕ್ಷ ರೂ ಮೊತ್ತದ ಮುವಾಟು ನಡೆಸಿದ್ದಾರೆ. ಈ ಸಂಬಂಧ ಆತೆಗೆ ಬ್ಯಾಂಕ ಗ್ರಾಹಕ ಸೇವಾ ಕೇಂದ್ರದಿಂದ ಕರೆ ಬಂದಿತ್ತು. ಇದು ತಾನೇ ನಡೆಸಿದ ವಹಿವಾಟು ಎಂದು ಅವರಿಗೆ ಹೆಸಳಬೇಕು. ಇಲ್ಲವಾದರೆ ಪ್ರಕರಣ ಅಂತ್ಯ ಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ವಂಚಕ ಹೇಳಿದ್ದ.

ಇಷ್ಟೆಲ್ಲಾ ಹಣ ವರ್ಗಾವಣೆ ಆದ ಬಳಿಕ ಆತ “ಮಾದಕವಸ್ತು ಪರೀಕ್ಷೆ ನಡೆಸಬೇಕು. ಇದಕ್ಕಾಗಿ ಬಟ್ಟೆ ಕಳಚಿ ಎಂದು ಆದೇಶಿಸಿದ್ದ. ಕ್ಯಾಮೆರಾ ಎದುರು ಆಕೆ ಉಡುಪುಗಳನ್ನು ಕಳಚಿದ್ದರು. ಹಾಗೆ ಮಾಡದಿದ್ದರೆ, ನನ್ನನ್ನು ಮತ್ತು ನನ್ನ ಕುಟುಂಬವನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗುವುದು. ಇಡೀ ಕುಟುಂಬವನ್ನು ಸಾಯಿಸಲಾಗುವುದು ಎಂದು ಬೆದರಿಕೆ ಹಾಕಿ ನಿಂದಿಸಿದ್ದ ಎಂದು ವಕೀಲೆ ದೂರಿನಲ್ಲಿ ತಿಳಿಸಿದ್ದಾರೆ.

ಇದರ ಬಳಿಕ ಆಕೆಯ ಬೆತ್ತಲೆ ವಿಡಿಯೋಗಳನ್ನು ಇರಿಸಿಕೊಂಡು ಬ್ಲ್ಯಾಕ್ಮೇಲ್ ಮಾಡತೊಡಗಿದ್ದ ಅದೇ ದಿನ ಮಧ್ಯಾಹ್ಮ3 ಗಂಟೆ ಒಳಗೆ 10 ಲಕ್ಷ ರೂ ನೀಡದೆ ಹೋದರೆ ಡಾರ್ಕ್ ವೆಬ್ ಹಾಗೂ ಹಲವಾರು ಜನರಿಗೆ ವಿಡಿಯೋ ಗಳನ್ನು ಮಾರಾಟ ಮಾಡುವುದಾಗಿ ಬೆದರಿಸಿದ್ದ ಇದರ ಬಳಿಕ ವಕೀಲೆ ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದಾರೆ.

ಕೃಪೆ :  ಮೈಸೂರು ಮಿತ್ರ

key words :  Lawyer , stripped naked, robbed,  Rs 14 lakh, cyber fraudsters

ENGLISH SUMMARY

Cyber fraudsters are now expanding the network of fraud by targeting lawyers.  Bengaluru lawyer threatened, stripped naked, duped of Rs 14 lakh The incident of robbery took place.

An attempt to extort Rs 10 lakh from the lawyer through blackmail, using a nude video of the lawyer, failed. The woman, who fell into the trap of  fraudsters despite being aware of the canon and cyber fraud, has finally approached the police station.  The 29-year-old lawyer was literally a cyber hostage for two days.

.