ಸಂಗಣ್ಣ ಕರಡಿ ನಿವಾಸಕ್ಕೆ ಲಕ್ಷ್ಮಣ್ ಸವದಿ ದಿಢೀರ್ ಭೇಟಿ: 'ಕೈ' ಹಿಡಿತಾರಾ ಬಿಜೆಪಿ ಸಂಸದ..?
06:32 PM Apr 15, 2024 IST
|
prashanth
ಕೊಪ್ಪಳ,ಏಪ್ರಿಲ್,15,2024 (www.justkannada.in): ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು ಪ್ರಚಾರ, ನಾಮಪತ್ರ ಸಲ್ಲಿಕೆ ಭರಾಟೆ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ಹಾಲಿ ಸಂಸದ ಸಂಗಣ್ಣ ಕರಡಿ ನಿವಾಸಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ದಿಢೀರ್ ಭೇಟಿ ನೀಡಿದ್ದಾರೆ.
ಕೊಪ್ಪಳದ ಸಂಗಣ್ಣ ಕರಡಿ ಅವರ ನಿವಾಸಕ್ಕೆ ಶಾಸಕ ಲಕ್ಷ್ಮಣ್ ಸವದಿ ಭೇಟಿ ನೀಡಿದ್ದಾರೆ. ಸಂಗಣ್ಣ ಕರಡಿ ಅವರ ಜೊತೆ ಲಕ್ಷ್ಮಣ್ ಸವದಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬಿಜೆಪಿ ಟಿಕೆಟ್ ವಂಚಿತರಾಗಿ ಅಸಮಾಧಾನಗೊಂಡಿರುವ ಸಂಗಣ್ಣ ಕರಡಿ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಶಾಸಕ ಲಕ್ಷ್ಮಣ್ ಸವದಿ ಯತ್ನಿಸುತ್ತಿದ್ದಾರೆ ಎನ್ನಲಾಗಿದ್ದು ಈ ಭಾಗವಾಗಿ ಇಂದು ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಹೀಗಾಗಿ ಸಂಗಣ್ಣ ಕರಡಿ ಬಿಜೆಪಿಯಲ್ಲಿರುತ್ತಾರೋ ಅಥವಾ ಕಾಂಗ್ರೆಸ್ ಸೇರುತ್ತಾರೋ ಕಾದು ನೋಡಬೇಕಿದೆ.
Key words: Laxman Savadi, meet, BJP, Sanganna Karadi