HomeBreaking NewsLatest NewsPoliticsSportsCrimeCinema

ವಿಧಾನ ಮಂಡಲ ಅಧಿವೇಶನ: ವಿಪಕ್ಷಗಳ ಧರಣಿ ನಡುವೆ ಮೂರು ವಿಧೇಯಕ ಮಂಡನೆ

01:04 PM Jul 19, 2024 IST | prashanth

ಬೆಂಗಳೂರು,ಜುಲೈ,19,2024 (www.justkannada.in): ವಾಲ್ಮೀಕಿ ಅಭಿವದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದು ಈ ಮಧ್ಯೆಯೂ ಮೂರು ವಿಧೇಯಕಗಳನ್ನ ಮಂಡನೆ ಮಾಡಲಾಯಿತು.

ವಾಲ್ಮೀಕಿ ಅಭಿವದ್ಧಿ ನಿಗಮದಲ್ಲಿ ನಡೆದಿದೆ ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಂಜಸ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷಗಳು ನಿನ್ನೆ ಆರಂಭಿಸಿದ ಧರಣಿಯನ್ನು ವಿಧಾನಸಭೆಯಲ್ಲಿ ಇಂದು ಮುಂದುವರೆಸಿದರು.

ಬಿಜೆಪಿ ಮತ್ತು ಜೆಡಿಎಸ್‌‍ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗೆ ಇಳಿದು ಧರಣಿ ಮುಂದುವರೆಸಿದರು. ವಿಪಕ್ಷಗಳ ಪ್ರತಿಭಟನೆ ನಡುವೆ ವಿಧಾನಸಭೆಯಲ್ಲಿ ಸರಕು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ, ಸಿನಿ ಸಾಂಸ್ಕೃತಿಕ ಕ್ಷೇಮಾಭಿವೃದ್ದಿ ವಿದೇಯಕ ಸೇರಿ ಮೂರು ಮಸೂದೆಗಳನ್ನ ಮಂಡನೆ ಮಾಡಲಾಗಿದೆ.

Key words:  Legislative Assembly, Monsoon, Session, Three bills

Tags :
legislative assemblyMonsoonsessionThree bills
Next Article