ವಿಧಾನ ಪರಿಷತ್ ಚುನಾವಣೆ; ಯತೀಂದ್ರ ಪರ ಡಾ. ಹೆಚ್.ಸಿ ಮಹದೇವಪ್ಪ ಪರೋಕ್ಷ ಬ್ಯಾಟಿಂಗ್.
ಮೈಸೂರು,ಮೇ,24,2024 (www.justkannada.in0): ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಪರವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಕಳೆದ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರವನ್ನು ತಂದೆಗಾಗಿ ತ್ಯಾಗ ಮಾಡಿದ್ದಾರೆ. ಹೈಕಮಾಂಡ್ ಆಗ ನೀವು ಸ್ಪರ್ಧೆ ಮಾಡಬೇಡಿ, ನಿಮ್ಮ ತಂದೆ ಸ್ಪರ್ಧೆ ಮಾಡಲಿ ಎಂದು ಹೇಳಿದ್ದರು. ಅದಕ್ಕೆ ಅವರು ತಲೆ ಬಾಗಿದ್ದರು. ಹೀಗಾಗಿ ಇವತ್ತಿನ ಸಂದರ್ಭದಲ್ಲೂ ಅವರ ಬಗ್ಗೆ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಸರ್ಕಾರ ಇರುವ ಕಾರಣ ವಿಧಾನ ಪರಿಷತ್ ಗೆ ಲಾಬಿಯು ಕೂಡ ಹೆಚ್ಚಾಗಿದೆ. ಪರಿಷತ್ ವಿಚಾರ ಯಾವಾಗಲು ಲಾಬಿ ಇದ್ದೆ ಇರುತ್ತದೆ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು.
ವಿಧಾನ ಪರಿಷತ್ ಚುನಾವಣಾಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಯಾವುದೇ ದಕ್ಕೆ ಇಲ್ಲ ಎಂದರು.
ಮಳೆಯಿಂದ ಮೈಸೂರಿನಲ್ಲಿ ಅಪಾರ ಪ್ರಮಾಣದ ನಷ್ಟ
ಇನ್ನು ಮಳೆಯಿಂದ ಮೈಸೂರಿನಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕೃಷಿಯಲ್ಲಿ 6900 ಹೆಕ್ಟೇರ್ ನಷ್ಟು ಹಾನಿಯಾಗಿದೆ. ತೋಟಗಾರಿಕೆಯಲ್ಲಿ 4 ಸಾವಿರ ಹೆಕ್ಟೇರ್ ಹಾನಿಯಾಗಿದೆ. 6 ಮನೆಗಳು ಕುಸಿತಿದೆ, 60 ಮನೆಗಳ ಗೋಡೆ ಕುಸಿದಿದೆ. ಬಿದ್ದು ಹೋಗಿರುವ ಮನೆಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗಿದೆ. ಮನೆ ಗೋಡೆ ಕುಸಿತಗೊಂಡಿರುವ ಮನೆಗಳಿಗೆ 25 ಸಾವಿರ ರಿಪೇರಿಗೆ ನೀಡಲಾಗಿದೆ. ಕುಮಾರಸ್ವಾಮಿಯವರು ಅತಿವೃಷ್ಟಿ ಬಗ್ಗೆ ಸರ್ಕಾರಕ್ಕೆ ಬೇಕಿದ್ರೆ ಸಲಹೆ ನೀಡಲಿ. ಅದನ್ನ ಬಿಟ್ಟು ರಾಜಕೀಯಕ್ಕಾಗಿ ಮುಂದಾದರೆ ಅದಕ್ಕೆ ಉತ್ತರ ಇಲ್ಲ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದರು.
Key words: Legislative Council, Dr. Yatindra, HC Mahadevappa