HomeBreaking NewsLatest NewsPoliticsSportsCrimeCinema

ಬೆಂಗಳೂರಿನಲ್ಲಿ ಅರಣ್ಯ ಸಿಬ್ಬಂದಿ ಮೇಲೆ ಚಿರತೆ ದಾಳಿ :  ಚಿರತೆ ಸೆರೆಗೆ ಮುಂದುವರೆದ ಕಾರ್ಯಾಚರಣೆ.

11:26 AM Nov 01, 2023 IST | prashanth

ಬೆಂಗಳೂರು,ನವೆಂಬರ್,1,2023(www.justkannada.in):  ಕಳೆದ ಮೂರು ದಿನದ ಹಿಂದೆ ಬೆಂಗಳೂರಿನ ಕೂಡ್ಲುಗೇಟ್, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಓಡಾಡಿ ಜನರಲ್ಲಿ ಆತಂಕ ಸೃಷ್ಟಿಸಿರುವ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ.

ಇಂದು ಚಿರತೆ ಪತ್ತೆಯಾಗಿದ್ದು  ಅರಣ್ಯ ಸಿಬ್ಬಂದಿಯೊಬ್ಬರ ಮೇಲೆ ದಾಳಿ ಮಾಡಿ ಕತ್ತಿನ ಭಾಗಕ್ಕೆ ಪರಚಿರುವ ಘಟನೆ  ನಡೆದಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಪ್ರದೇಶದ ಅಪಾರ್ಟ್ಮೆಂಟ್ ಒಂದರಲ್ಲಿ ಘಟನೆ ನಡೆದಿದೆ.  ಪಾಳು ಬಿದ್ದ ಕಟ್ಟಡದ ಬೇಸ್ಮೆಂಟ್ ನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿದೆ.

ಅರವಳಿಕೆ ಮದ್ದು ನೀಡಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಡಾಕ್ಟರ್ ಕಿರಣ್ ಅವರ ಮೇಲೆ ಚಿರತೆ ದಾಳಿ  ಮಾಡಿದೆ ಸಿಬ್ಬಂದಿ ಕತ್ತಿನ ಭಾಗಕ್ಕೆ ಚಿರತೆ ಪರಚಿದ್ದು,  ತಕ್ಷಣ ಕಿರಣ್ ಅವರನ್ನು ತಕ್ಷಣ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.

Key words: Leopard- attack - forest –staff- Bengaluru-Operation-continues

Tags :
Leopard- attack - forest –staff- Bengaluru-Operation-continues
Next Article