HomeBreaking NewsLatest NewsPoliticsSportsCrimeCinema

ಲೋಕಸಭೆ ಚುನಾವಣೆ: 4ನೇ ಹಂತದ ಮತದಾನ: ಶೇ 10.35 ರಷ್ಟು ವೋಟಿಂಗ್.

10:30 AM May 13, 2024 IST | prashanth

ನವದೆಹಲಿ,ಮೇ,13,2024 (www.justkannada.in): ದೇಶದಲ್ಲಿ ಇಂದು ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ನಡೆಯುತ್ತಿದ್ದು 9 ಗಂಟೆ ವೇಳೆಗೆ ಶೇ.10.35 ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೇಶದ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಒಟ್ಟಾರೆ 10 ರಾಜ್ಯಗಳಲ್ಲಿ 9 ಗಂಟೆ ವೇಳೆಗೆ ಶೇ.10.35 ರಷ್ಟು ಮತದಾನವಾಗಿದೆ ಆಂಧ್ರ ಪ್ರದೇಶ ಶೆ 9ರಷ್ಟು, ಬಿಹಾರ ಶೇ 10 ರಷ್ಟು ಜಮ್ಮು ಕಾಶ್ಮೀರ ಶೇ 5ರಷ್ಟು  ಜಾರ್ಖಂಡ್  ಶೇ 11.78 ರಷ್ಟು,  ಮಧ್ಯ ಪ್ರದೇಶ ಶೇ 14.97 ರಷ್ಟು ಮಹಾರಾಷ್ಟ್ರದಲ್ಲಿ ಶೇ 6.43 ರಷ್ಟು  ತೆಲಂಗಾಣದಲ್ಲಿ ಶೇ 9.51 ರಷ್ಟು ಮತದಾನವಾಗಿದೆ ಎನ್ನಲಾಗಿದೆ.

ಆಂಧ್ರದಲ್ಲಿ ಸಿಎಂ ಜಗನ್  ಹಾಗೂ  ಚಂಧ್ರ ಬಾಬು ನಾಯ್ಡು ಅಸಾದುದ್ದಿನ್ ಓವೈಸಿ ಮತದಾನ ಮಾಡಿದ್ದಾರೆ, ಮೆಗಾಸ್ಟಾರ್ ಚಿರಂಜೀವಿ ಸಹ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

Key words: Lok Sabha, Elections, 4th Phase, voting

 

Tags :
10.35 percentLok Sabha-Elections-4th Phase- Votingvoting
Next Article