HomeBreaking NewsLatest NewsPoliticsSportsCrimeCinema

ಲೋಕಸಮರ :  ರಾಜ್ಯದ ಎಲ್ಲ 27 ಸ್ಥಾನಗಳನ್ನೂ ಗೆದ್ದ ಕಾಂಗ್ರೆಸ್…!

11:56 AM Apr 24, 2024 IST | mahesh

 

ಬೆಂಗಳೂರು, ಏ.24, 2024 : (www.justkannada.in news)  ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 27 ಸ್ಥಾನಗಳನ್ನೂ ಗಳಿಸಿದ್ದ ಕಾಂಗ್ರೆಸ್, ಎರಡನೇ ಬಾರಿಗೆ ನಡೆದ ಪರೀಕ್ಷೆಯಲ್ಲಿ (ಉಪ ಚುನಾವಣೆ) ಜಯ ಗಳಿಸಿ ತನ್ನ ಹಿಂದಿನ ವಿಕ್ರಮವನ್ನು ಉಳಿಸಿಕೊಂಡಿದೆ.

ಆಶ್ಚರ್ಯವಾಗುತ್ತಿದೆಯಾ..? ಸ್ವಲ್ಪ ಇರಿ. ಈ ಫಲಿತಾಂಶ ಬಂದಿರೋದು ೫೦ ವರ್ಷಗಳ ಹಿಂದೆ. ಇದೇ ದಿನ. ಕನ್ನಡದ ಜನಪ್ರಿಯ ದಿನಪತ್ರಿಕೆ ʼ ಪ್ರಜಾವಾಣಿʼ ಯ ʼ 50 ವರ್ಷಗಳ ಹಿಂದೆ ʼ ಎಂಬ ಅಂಕಣದಲ್ಲಿ ಈ ಕುತೂಹಲಕಾರಿ ಅಂಶ ವರದಿಯಾಗಿದೆ.

ಪ್ರಸ್ತುತ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಈ ಸುದ್ಧಿ ಮಹತ್ವ ಪಡೆದುಕೊಂಡಿದೆ. 2024 ರ ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ ಎಲ್ಲಾ 27 ಕ್ಷೇತ್ರಗಳಿಗೂ ಸ್ಪರ್ಧಿಸಿರುವ ಕಾಂಗ್ರೆಸ್‌, ಈ ಬಾರಿ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳನ್ನುಅಖಾಡದಲ್ಲಿ ಎದುರಿಸುತ್ತಿದೆ. ಇದೇ ಶುಕ್ರವಾರ ರಾಜ್ಯದ ಮೊದಲ ಹಂತದ ಚುನಾವಣೇ  14 ಕ್ಷೇತ್ರಗಳಿಗೆ ನಡೆಯಲಿದೆ. ಮೇ.6 ರಂದು ಎರಡನೇ ಹಂತದ ಮತದಾನ ನಡೆಯಲಿದೆ.

50 ವರ್ಷಗಳ ಹಿಂದಿನ ಸುದ್ಧಿ ಗಮನಿಸುವುದಾದರೆ,  1971ರ ನಂತರ ಮಂಡ್ಯ ಕ್ಷೇತ್ರದಲ್ಲಿ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಸ್ಥಾನವನ್ನು ಉಳಿಸಿಕೊಂಡಿತು. ಆನಂತರ ಕಲ್ಬುರ್ಗಿ ಕ್ಷೇತ್ರದಲ್ಲಿ ನಡೆದ ಮರು ಚುನಾವಣೆಯಲ್ಲೂ ಈಗ ತನ್ನ 'ಸ್ಥಾನವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ ಎಂಬುದು ಸುದ್ದಿಯ ಸಾರ.

ಆದರೆ ಈ ಮಂಡ್ಯ ಕ್ಷೇತ್ರದಿಂದ ಯಾರು ಕಣದಲ್ಲಿದ್ದರು, ಅವರ ಎದುರಾಳಿ ಯಾರು..? ಎಷ್ಟು ಮತಗಳ ಅಂತರದಿಂದ ಗೆಲುವು.? ಎಂಬಿತ್ಯಾದಿ ಮಾಹಿತಿಗಳು ಪ್ರಕಟಗೊಂಡಿಲ್ಲ.

ಆದರೆ, ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 88 ಸಾವಿರ ಅಧಿಕ ಮತಗಳ ಜಯ ಎಂದು ವರದಿಯಲ್ಲಿ ಹೇಳಲಾಗಿದೆ. ಜತೆಗೆ,  ರಾಜ್ಯದ ರಾಜಕೀಯ ದೃಷ್ಟಿಯಿಂದ ಮಹತ್ವಪೂರ್ಣವಾದುದೆಂದು ಭಾವಿಸಲಾಗಿದ್ದ ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮರೆಡ್ಡಿ ಅವರು 87,791 ಮತಗಳಿಂದ ಭಾರಿ ಜಯ 1971ರ ಐತಿಹಾಸಿಕ ಲೋಕಸಭಾ  ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಸುದ್ದಿ ಹೇಳುತ್ತದೆ.

 

ಬಿಜೆಪಿ ಅಭ್ಯರ್ಥಿ ಯದುವೀರ್ ಗೆ ಕುಂಬಳಕಾಯಿಯಲ್ಲಿ ದೃಷ್ಟಿ ತೆಗೆದು ಶುಭ ಕೋರಿದ ವ್ಯಾಪಾರಿಗಳು.

 

ಜತೆಗೆ, ರಾಜ್ಯದ ಎಲ್ಲ 27 ಸ್ಥಾನಗಳನ್ನೂ ಗಳಿಸಿದ್ದ ಕಾಂಗ್ರೆಸ್, ಎರಡನೇ ಬಾರಿಗೆ ನಡೆದ ಪರೀಕ್ಷೆಯಲ್ಲಿ(ಉಪ ಚುನಾವಣೆಯಲ್ಲಿ ) ಜಯ ಗಳಿಸಿ ತನ್ನ ಹಿಂದಿನ ವಿಕ್ರಮವನ್ನು ಉಳಿಸಿಕೊಂಡಿದೆ ಎಂಬುದಾಗಿ ಪತ್ರಿಕೆ ವರದಿ ಮಾಡಿದೆ.

key words: Lok Sabha elections, Congress wins, all 27 seats, in Karnataka.

summary :

The Congress, which had won all the 27 seats in the state in the Lok Sabha elections, retained its previous vikram by winning the by-elections for the second time.

Tags :
all 27 seatsCongress-winsin karnatakaLok Sabha elections
Next Article