HomeBreaking NewsLatest NewsPoliticsSportsCrimeCinema

ಮೈಸೂರಿನ "ಷೂ ವರ್ಲ್ಡ್‌'ನಲ್ಲಿ ಲೋಕಸಭಾ ಚುನಾವಣಾ ಪ್ರಯುಕ್ತ ಭಾರಿ ಕೊಡುಗೆ:  ವೋಟ್‌ ಮಾಡಿ, ರೂ.500  ರಿಯಾಯಿತಿ ಪಡೆಯಿರಿ.

02:00 PM Apr 26, 2024 IST | prashanth

ಮೈಸೂರು,ಏಪ್ರಿಲ್, 26,2024 (www.justkannada.in): ಮೈಸೂರಿನ ಹೆಸರಾಂತ ಪಾದರಕ್ಷೆಗಳ ಮಾರಾಟ ಸಂಸ್ಥೆಯಾದ “ಷೂ ವರ್ಲ್ಡ್‌” ಸಂಸ್ಥೆಯು ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ದಿನಾಂಕ 26 ರಿಂದ 28 ರ ಏಪ್ರಿಲ್‌ 2024 ರವರೆಗೆ ಮತದಾನ ಮಾಡಿದ ಗ್ರಾಹಕರಿಗೆ ಭಾರೀ ಕೊಡುಗೆಯನ್ನು ನೀಡುತ್ತಿದೆ.

ಕಳೆದ 25 ವರ್ಷಗಳಿಂದ ಮೈಸೂರಿನ ಜನಮಾನಸದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿರುವ “ಷೂ ವರ್ಲ್ಡ್‌” ಸಂಸ್ಥೆಯು 'ಮೈಸೂರಿನ ಜನತೆಯ ಪಾದರಕ್ಷೆಯ ಖರೀದಿಯ ಅತ್ಯುತ್ತಮ ತಾಣಗಳಲ್ಲಿ ಒಂದು” ಎಂಬ ಹೆಗ್ಗಳಿಕೆ ಗಳಿಸಿದೆ. “ಷೂ ವರ್ಲ್ಡ್‌”ನಲ್ಲಿ ಸ್ತ್ರೀ ಮತ್ತು "ಪುರುಷರ ಗುಣಮಟ್ಟದ ಉತ್ತಮ ದರ್ಜೆಯ ಚಪ್ಪಲಿ, ಷೂ ಮತ್ತು ಇನ್‌ ಹೌಸ್‌ ಬ್ರಾಂಡ್‌ ನ ಪಾದರಕ್ಷೆಗಳು ರೂ.1,500/- ಗಳ ಮೇಲ್ಪಟ್ಟ  ೩ ಖರೀದಿಯ ಮೇಲೆ ಮತದಾನ ಮಾಡಿದವರು ಮತದಾನ ಮಾಡಿದ ಗುರುತನ್ನು ತೋರಿಸಿ ರೂ.500/- ಕ್ಯಾಷ್‌ ಬ್ಯಾಕ್‌ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಈ ಬಾರಿ 2024ರ ಲೋಕಸಭಾ ಚುನಾವಣಾ ಪ್ರಯುಕ್ತ ಸಂಸ್ಥೆಯು ಸಾರ್ವಜನಿಕರಲ್ಲಿ "ನಮ್ಮ ಮತ ನಮ್ಮ ಹಕ್ಕು' ಎ೦ಬ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಒ೦ದು ಉತ್ತಮ ಹೆಜ್ಜೆಯನ್ನಿರಿಸಿದ್ದು 'ವೋಟ್‌ ಮಾಡಿ" ಅಭಿಯಾನವನ್ನು ನಡೆಸುತ್ತಿದೆ. ಒಗ್ಗಟ್ಟಿನಿಂದ ಮತದಾನ ಮಾಡುವ ಮೂಲಕ ದೇಶವನ್ನು ಮುನ್ನಡೆಸಲು ಮತದಾನವನ್ನು ಮಾಡೋಣ ಎಂಬ ಧ್ಯೇಯದೊಂದಿಗೆ, ಮತದಾತರಿಗೆ ಮತವನ್ನು ಹಾಕಲು  ಉತ್ತೇಜಿಸುವ ಜೊತೆಗೆ ಮತದಾನ ಮಾಡಿದ ಗ್ರಾಹಕರಿಗೆ "ಇನ್‌ ಹೌಸ್‌ ಪಾದರಕ್ಷೆಗಳ ಖರೀದಿಯ ಸಮಯದಲ್ಲಿ ಕ್ಯಾಷ್‌ ಬ್ಯಾಕ್‌ ನ ಕೊಡುಗೆಯನ್ನು ನೀಡುತ್ತಿದೆ. ರಾಮಸ್ವಾಮಿ ವೃತ್ತದ  ಪ್ರೆಸ್ಟೀಜ್ ಶಾಪಿಂಗ್‌ ಕಾಂಪ್ಲೆಕ್ಸ್‌ ನಲ್ಲಿರುವ ಮಳಿಗೆಯಲ್ಲಿ,“ಶೂ ವರ್ಲ್ಡ್‌” ನಲ್ಲಿ ಸ್ಥಳೀಯ, ಭಾರತೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಷೂಗಳು ರಿಯಾಯಿತಿ ದರದಲ್ಲಿ ದೊರಕುತ್ತದೆ. ಸಂಸ್ಥೆಯು ಶಾಲೆ-ಕಾಲೇಜು, ಆಸ್ಪತ್ರೆ, ಸ್ವಚ್ಛತಾ ಕಾರ್ಮಿಕರಿಗೆ ಹಾಗೂ ಕೈಗಾರಿಕಾ ಸಂಸ್ಥೆಗಳಿಗೆ ಗುಣಮಟ್ಟದ ಫುಟ್‌ ವೇರ್‌ಗಳನ್ನು ಸಗಟು ದರದಲ್ಲಿ ಒದಗಿಸುತ್ತಿದೆ.

ವೈದ್ಯರು ಸಲಹೆ ನೀಡುವ ಮೆಡಿಕಲ್‌ ಫುಟ್ ವೇರ್‌ಗಳು ಇಲ್ಲಿ ಲಭ್ಯವಿದೆ. ಈ ಕೊಡುಗೆಯು ದಿನಾಂಕ 26 ರಿಂದ 28 ರ ಏಪ್ರಿಲ್‌ 2024 ರ ವರೆಗೆ (ಮೂರು ದಿನ ಮಾತ್ರ) ಲಭ್ಯವಿದ್ದು ಗ್ರಾಹಕರು ಮತದಾನವನ್ನು ಮಾಡುವ ಮೂಲಕ ಈ ಕೊಡುಗೆಯ ಲಾಭವನ್ನು ಪಡೆಯಬೇಕೆಂದು ಷೂ ವರ್ಲ್ಡ್‌' ವ್ಯವಸ್ಥಾಪಕ ಹೆಚ್.ಎ ಅಮರನಾಥ್ ಕೋರಿದ್ದಾರೆ.

Key words: Lok Sabha, elections, Shoe World, Mysore

Tags :
Lok Sabha- elections - Shoe World- Mysore- discount
Next Article