For the best experience, open
https://m.justkannada.in
on your mobile browser.

ರಾಜ್ಯದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸಿ: ಸಂಸದರಾದ ಮೂವರು ಮಾಜಿ ಸಿಎಂಗಳಿಗೆ ಹೆಚ್.ವಿಶ್ವನಾಥ್  ಕಿವಿಮಾತು.

03:08 PM Jun 05, 2024 IST | prashanth
ರಾಜ್ಯದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸಿ  ಸಂಸದರಾದ ಮೂವರು ಮಾಜಿ ಸಿಎಂಗಳಿಗೆ ಹೆಚ್ ವಿಶ್ವನಾಥ್  ಕಿವಿಮಾತು

ಮೈಸೂರು,ಜೂನ್,5,2024 (www.justkannada.in): ರಾಜ್ಯದ ಅಭಿವೃದ್ದಿಗೆ ಒಗ್ಗಟ್ಟಾಗಿ ಕೆಲಸ ಮಾಡುವಂತೆ  ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಗೆಲುವು ಸಾಧಿಸಿದ ಮೂವರು ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ  ಅವರಿಗೆ ವಿಧಾನಪರಿತ್ ಸದಸ್ಯ ಹೆಚ್.ವಿಶ್ವನಾಥ್ ಕಿವಿಮಾತು ಹೇಳಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್,  ಸಂಸತ್ತಿಗೆ ಆಯ್ಕೆಯಾದ ರಾಜ್ಯದ  28 ಜನರಿಗೂ ಅಭಿನಂದನೆ ಸಲ್ಲಿಸುತ್ತೇನೆ. 28 ಜನ ಸಂಸದರೂ ಕೂಡ ಪಕ್ಷತೀತವಾಗಿ ಕೆಲಸ ಮಾಡಬೇಕು. ಕಳೆದ ಬಾರಿ ಆಯ್ಕೆಯಾದ ಸಂಸದರು ರಾಜ್ಯದ ಸಮಸ್ಯೆಗಳು ನೆಲ, ಜಲ, ನಾಡಿನ  ಸಮಸ್ಯೆಗಳ ಕುರಿತು ಪ್ರಶ್ನೆಯನ್ನೇ ಮಾಡಲಿಲ್ಲ. ಈಗ ಆಯ್ಕೆಯಾದ ಸಂಸದರು ಆ ರೀತಿಯಾಗಬಾರದು. ಈ ಬಾರಿ ಮೂರು ಮಾಜಿ ಸಿಎಂಗಳು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ರಾಜ್ಯದ ಸಮಸ್ಯೆಗಳನ್ನ ಬಗಹರಿಸುವ ಕೆಲಸವನ್ನ ನೀವು ಮಾಡಬೇಕು. ನಿಮಗೆ ಮುಖ್ಯಮಂತ್ರಿಗಳಾಗಿ ಸಾಕಷ್ಟು ಅನುಭವವಿದೆ. ನಮ್ಮ‌ ಅವಧಿಯಲ್ಲಿ ಕರ್ನಾಟಕದ ಯಾವುದೇ ಸಮಸ್ಯೆಗಳಿಗೆ ಒಟ್ಟಾಗಿ ಹೋರಾಟ ಮಾಡುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ಒಗ್ಗಟ್ಟಿನ‌ ಕೊರತೆ ಇದೆ. ನಾಡಿನ ಸಮಸ್ಯೆಗಳು ಬಂದಾಗ ಈ ಮೂವರು ನೇತೃತ್ವ ವಹಿಸಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ನೂತನ ಸಂಸದರಾದ ಎಚ್ ಡಿ ಕುಮಾರಸ್ವಾಮಿ, ಬಸರವಾಜು ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟಿರ್ ಗೆ ಕಿವಿಮಾತು ಹೇಳಿದರು.

ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಬಿಜೆಪಿ ಸೋಲು: ಭಾವನಾತ್ಮಕ ವಿಚಾರಗಳು ವರ್ಕೌಟ್ ಆಗೋಲ್ಲ

ಶ್ರೀರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆಯಲ್ಲೇ ಬಿಜೆಪಿಗೆ ಸೋಲಾಗಿದೆ. ಇಲ್ಲಿ ಭಾವನಾತ್ಮಕ ವಿಚಾರಗಳು ವರ್ಕೌಟ್ ಆಗೋಲ್ಲ ಎನ್ನುವುದನ್ನ ಅಲ್ಲಿನ ಜನ ಸಾಬೀತು ಮಾಡಿದ್ದಾರೆ. ಜನರಿಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.

ಇದೇ ವೇಳೆ ಪ್ರಧಾನಿ ಮೋದಿ ಹೇಳಿಕೆ ಖಂಡಿಸಿದ ಹೆಚ್.ವಿಶ್ವನಾಥ್ , ಮಹಾತ್ಮಗಾಂಧಿ ಯಾರೆಂದು ಗೊತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಆಡಿದ ಮಾತು ಸರಿಯಲ್ಲ. ಸೂರ್ಯಚಂದ್ರ ಇರುವವರೆಗೂ ಮಹಾತ್ಮಗಾಂಧಿಯವರ ಹೆಸರು ಸ್ಥಿರವಾಗಿರುತ್ತದೆ ಎಂದರು.

ಯದುವೀರ್ ವಿರುದ್ದ ಅಭ್ಯರ್ಥಿ ನಿಲ್ಲಿಸಿ ಜಾತಿ ವಿಚಾರ ಮುಂದಿಟ್ಟು ಮತಯಾಚನೆ ಮಾಡಿದವರಿಗೆ ತಕ್ಕ ಪಾಠ..

ಮೈಸೂರು ಕೊಡಗು ಕ್ಷೇತ್ರದಲ್ಲಿ ಯದುವೀರ್ ಗೆಲುವು ಕುರಿತು ಮಾತನಾಡಿದ ಹೆಚ್.ವಿಶ್ವನಾಥ್, ಯದುವೀರ್  ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸದಂತೆ ಮಾಡಿಕೊಂಡ ಮನವಿಗೆ ಸಿಎಂ, ಡಿಸಿಎಂ ಸ್ಪಂದಿಸಲಿಲ್ಲ. ಅಭ್ಯರ್ಥಿಯನ್ನು ‌ನಿಲ್ಲಿಸಿ ಒಂದು ಲಕ್ಕಕ್ಕೂ ಹೆಚ್ಚು ಮತಗಳಿಂದ ಸೋಲಾಗಿದೆ. ಜನರು ಮಹಾರಾಜರನ್ನೇ ಗೆಲ್ಲಿಸಿದ್ದಾರೆ. ಜಾತಿ ವಿಚಾರ ಮುಂದಿಟ್ಟುಕೊಂಡು ಮತಯಾಚನೆ ಮಾಡಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಜನರು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗಿಂತ, ಸರ್ಕಾರ ನಡೆಸುವ ನಾಯಕರ ನಡವಳಿಕೆಗಳನ್ನು ಗಮನಿಸುತ್ತಾರೆ ಎಂದು ಟಾಂಗ್ ಕೊಟ್ಟರು.

ಸಿಎಂ ಸಿದ್ದರಾಮಯ್ಯ , ಮೋದಿ ನಡೆ ಖಂಡಿಸಿದ ಹಳ್ಳಿಹಕ್ಕಿ.

ಇದೇ ವೇಳೆ ಸಿಎಂ ಸಿದ್ದರಾಮಯ್ಯ , ಮೋದಿ ಅವರ ನಡೆ ಖಂಡಿಸಿದ ಹೆಚ್.ವಿಶ್ವನಾಥ್, ಸಿಎಂ ಏಕ ವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು. ತಮ್ಮ ದುರಂಕಾರದ ಮಾತುಗಳ ನಡವಳಿಕೆಯನ್ನು ನಿಲ್ಲಿಸಬೇಕು. ನಾಯಕರಾದವರು  ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು. ಜನರ ನಡುವೆ ಒಡಕುಂಟು ಮಾಡುವ ಮಾತುಗಳನ್ನು ನಾಯಕರು ಆಡಬಾರದು ಎಂದು ಸಲಹೆ ನೀಡಿದರು. ಹಾಗೆಯೇ ಪ್ರಚೋದನಾಕಾರಿ ಹೇಳಿಕೆ ಕೊಡುವ ಮೋದಿ ನಡೆಯನ್ನೂ ಖಂಡಿಸಿದರು.

ಇನ್ನೂ ಗೆಲುವು ಸಾಧಿಸಿರುವ ಯದವೀರ್ ಅವರಿಗೂ ಸಾಕಷ್ಟು ಜವಾಬ್ದಾರಿಗಳು ಇವೆ. ಇನ್ನು ಮುಂದಾದರೂ ಸರ್ಕಾರ ಯದವೀರ್ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಮೂವರು ಮಾಜಿ ಮುಖ್ಯಮಂತ್ರಿಗಳು ಸಂಸದರಾಗಿ ಆಯ್ಕೆಯಾಗಿರುವುದು ವಿಶೇಷ ಎಲ್ಲಾ ಸಂಸದರು ಒಗ್ಗಟ್ಟಿನಿಂದ ರಾಜ್ಯದ ಅಭಿವೃದ್ಧಿಗೆ ಸ್ಪಂದಿಸಬೇಕು  ಎಂದರು.

Key words: Lokasabha election, Result, H.Vishwanath, Mysore

Tags :

.