For the best experience, open
https://m.justkannada.in
on your mobile browser.

ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ, ಪರಿಶೀಲನೆ

06:09 PM Jul 29, 2024 IST | prashanth
ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ  ಪರಿಶೀಲನೆ

ಬೆಂಗಳೂರು, ಜುಲೈ, 29,2024 (www.justkannada.in): ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್‌ ಅವರು ಇಂದು ವಿಕ್ಟೋರಿಯಾ ಆಸ್ಪತ್ರೆಗೆ  ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆ  ವಿಕ್ಟೋರಿಯಾ ಆಸ್ಪತ್ರೆಗೆ  ಇಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್‌ ಹಾಗೂ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ಮತ್ತು ನ್ಯಾ.ವೀರಪ್ಪ ಭೇಟಿ ನೀಡಿದರು. ವಿಕ್ಟೋರಿಯಾ ಆಸ್ಪತ್ರೆಯ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ  ನಡೆಸಿದ್ದು, ಈ ವೇಳೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್‌ ಅವರು ರೋಗಿಗಳ ಸಮಸ್ಯೆಯನ್ನು ಆಲಿಸಿದರು.

ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೋಗಿಯೊಬ್ಬರು ಬಿದ್ದು ನರಳುತ್ತಿದ್ದರೂ ಯಾರು ಚಿಕಿತ್ಸೆ ನೀಡುತ್ತಿರಲಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡದೆ ವೈದ್ಯರು ಸ್ಪಂದಿಸದ ಬಗ್ಗೆ ದೂರು ಬಂದಿದ್ದವು. ಈ ಬಗ್ಗೆ ಸಾಕಷ್ಟು ದೂರು ಬಂದಿದ್ದ ಹಿನ್ನೆಲೆ ದಿಢೀರ್​ ಭೇಟಿ ನೀಡಿದ್ದೇವೆ ಎಂದು ಹೇಳಿದ್ದಾರೆ.

ಮೆಡಿಸನ್ ಕೊಟ್ಟಿರುವ ಬಗ್ಗೆ ರಿಜಿಸ್ಟರ್​​ನಲ್ಲಿ ಎಂಟ್ರಿ ಮಾಡುತ್ತಿರಲಿಲ್ಲ. ಮೂವರನ್ನು ಡಾಟಾ ಎಂಟ್ರಿ ಆಪರೇಟರ್​ ನೇಮಕ ಮಾಡಿಕೊಂಡಿದ್ದಾರೆ. ನಾವು ಭೇಟಿ ನೀಡಿದ ವೇಳೆ ಎಮರ್ಜೆನ್ಸಿ ಮೆಡಿಷನ್ ಇಲ್ಲಾ ಅಂತಿದ್ದಾರೆ. ಕಾಂಟ್ರ್ಯಾಕ್ಟರ್ ಬಿಲ್ ಪೆಡಿಂಗ್ ಇರುವುದರಿಂದ ಸಪ್ಲೈ ಮಾಡಿಲ್ಲ ಎಂದಿದ್ದಾರೆ.  ಓಪಿಡಿಯಲ್ಲಿ ಎಲ್ಲಾ ಡಾಕ್ಟರ್ ಇರಲಿಲ್ಲ, ಪಿಜಿ ಡಾಕ್ಟರ್ ಮಾತ್ರ ಇದ್ದಾರೆ. ಸೂಪರಿಂಡೆಂಟ್ ಕರೆಸಿದ್ದವು, ಆಸ್ಪತ್ರೆಯ ಕೆಲ ವೈದ್ಯಾಧಿಕಾರಿಗಳು ಬಂದ್ದರು. ರೋಗಿಗಳಿಗೆ ಆಸ್ಪತ್ರೆಯಲ್ಲಿ ಸರಿಯಾದ ಮಾರ್ಗದರ್ಶನ ಸಿಗಬೇಕು ಎಂದು ನ್ಯಾ. ಬಿ.ಎಸ್.ಪಾಟೀಲ್‌ ಹೇಳಿದರು.

Key words: Lokayukta Justice, visits, Victoria Hospital

Tags :

.