ಲೋಕಸಭೆ ಚುನಾವಣೆ 5ನೇ ಹಂತದ ಮತದಾನ: 11 ಗಂಟೆ ವೇಳೆಗೆ ಶೇ 23.66 ರಷ್ಟು ವೋಟಿಂಗ್.
12:20 PM May 20, 2024 IST
|
prashanth
ನವದೆಹಲಿ,ಮೇ,20,2024 (www.justkannada.in): ಇಂದು ದೇಶದಲ್ಲಿ ಲೋಕಸಭೆ ಚುನಾವಣೆ 5ನೇ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 23.66 ರಷ್ಟು ವೋಟಿಂಗ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ , ಉತ್ತರ ಪ್ರದೇಶ , ಪಶ್ಚಿಮ ಬಂಗಾಳ, ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಇಂದು ಮತದಾನ ನಡೆಯುತ್ತಿದೆ. ಐದನೆ ಹಂತದಲ್ಲಿ 49 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 23.66 ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇ 21ರಷ್ಟು, ಜಾರ್ಖಂಡ್ ನಲ್ಲಿ ಶೇ 28ರಷ್ಟು, ಲಡಾಕ್ ನಲ್ಲಿ ಶೇ 28ರಷ್ಟು, ಮಹಾರಾಷ್ಟ್ರದಲ್ಲಿ ಶೇ 15 ರಷ್ಟು , ಒಡಿಶಾದಲ್ಲಿ ಶೇ 21ರಷ್ಟು, ಉತ್ತರ ಪ್ರದೇಶದಲ್ಲಿ ಶೇ 28ರಷ್ಟು ಮತದಾನವಾಗಿದೆ.
Key words: LokSabha Election –5 Phase- Voting- 23.66 percent
Next Article