For the best experience, open
https://m.justkannada.in
on your mobile browser.

ಲೋಕಸಭೆ ಚುನಾವಣೆ: ಖರ್ಗೆ, ಶೆಟ್ಟರ್ ಸೇರಿ ರಾಜಕೀಯ ಗಣ್ಯರಿಂದ  ಮತದಾನ.

01:12 PM May 07, 2024 IST | prashanth
ಲೋಕಸಭೆ ಚುನಾವಣೆ  ಖರ್ಗೆ  ಶೆಟ್ಟರ್ ಸೇರಿ ರಾಜಕೀಯ ಗಣ್ಯರಿಂದ  ಮತದಾನ

ಬೆಳಗಾವಿ,ಮೇ,7,2024 (www.justkannada.in): ಇಂದು ರಾಜ್ಯದಲ್ಲಿ ಉಳಿದ 14  ಲೋಕಸಭೆ ಕ್ಷೇತ್ರಗಳಿಗೆ  2ನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸೇರಿ ರಾಜಕೀಯ ಗಣ್ಯರು ಇಂದು ತಮ್ಮ ಹಕ್ಕು ಚಲಾಯಿಸಿದರು.

ಕಲ್ಬುರ್ಗಿಯಲ್ಲಿ  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಸಮೇತ ಆಗಮಿಸಿ ಮತಚಲಾಯಿಸಿದರು. ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮತದಾನ ಮಾಡಿದರು.  ಗೋಕಾಕ್ ನ  ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ವೋಟಿಂಗ್ ಮಾಡಿದಿದರು . ಗದಗದ ಹುಲಕೋಟಿ ಗ್ರಾಮದಲ್ಲಿ ಸಚಿವ ಹೆಚ್.ಕೆ ಪಾಟೀಲ್,  ವಿಜಯಪುರ ಸರ್ಕಾರಿ ಶಾಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಮತದಾನ ಮಾಡಿದರು.

ಬಿಜೆಪಿ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ ಅವರು  ಕುಟುಂಬ ಸಮೇತ ವಿಜಯಪುರದಲ್ಲಿನ ಶ್ರೀ ಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿರುವ ಮತ ಕೇಂದ್ರ-70 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ವಿಜಯಪುರದ ಹೊಸ ವಿಠ್ಠಲ ಮಂದಿರ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ 117 ಸಂಖ್ಯೆಯ ಮತಗಟ್ಟೆಗೆ  ತೆರಳಿ ಸಚಿವ ಶಿವಾನಂದ ಪಾಟೀಲ್ ತಮ್ಮ ಹಕ್ಕು ಚಲಾಯಿಸಿದರು. ಉಳಿದಂತೆ ಹಾವೇರಿ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಹಾಗೂ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಆನಂದ್ ಸಿಂಗ್  ಮತದಾನ ಮಾಡಿದರು.

Key words: LokSabha, Elections, karnataka, voting

Tags :

.