ಲೋಕಸಭೆ ಭದ್ರತಾ ವೈಫಲ್ಯ ವಿಚಾರ: ಪ್ರಕರಣವನ್ನ ರಾಜಕೀಯವಾಗಿ ಬಳಸಿಕೊಳ್ಳಬೇಡಿ- ಸ್ಪೀಕರ್ ಓಂ ಬಿರ್ಲಾ.
12:03 PM Dec 18, 2023 IST
|
prashanth
ನವದೆಹಲಿ,ಡಿಸೆಂಬರ್,18,2023(www.justkannada.in): ಲೋಕಸಭೆ ಮೇಲೆ ದುಷ್ಕರ್ಮಿಗಳು ದಾಳಿ, ಭದ್ರತಾ ವೈಫಲ್ಯ ವಿಚಾರ ಸಂಬಂಧ ಪ್ರಕರಣವನ್ನ ರಾಜಕೀಯವಾಗಿ ಬಳಸಿಕೊಳ್ಳಬೇಡಿ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.
ಲೋಕಸಭೆ ಕಲಾಪದಲ್ಲಿ ಮಾತನಾಡಿರುವ ಸ್ಪೀಕರ ಓಂ ಬಿರ್ಲಾ, ಸಂಸತ್ ದಾಳಿಯಂಥಾ ಪ್ರಕರಣ ಈ ಹಿಂದೆಯೂ ಆಗಿದೆ. ಪ್ರಕರಣವನ್ನ ರಾಜಕೀಯವಾಗಿ ಬಳಸಿಕೊಳ್ಳಬೇಡಿ ಎಂದರು.
ಹಾಗೆಯೇ 14 ಸಂಸದರನ್ನ ಅಮಾನತು ಅಮಾನತು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸ್ಪೀಕರ್ ಓ ಬಿರ್ಲಾ, ಬೇರೆ ಆಯ್ಕೆ ಇಲ್ಲದೇ ಸಂಸದರನ್ನ ಅಮಾನತು ಮಾಡಬೇಕಾಯಿತು ಸದನದ ಸಂಪ್ರದಾಯ ಕಾಪಾಡಲು ಅಮಾನತು ಮಾಡಲಾಯಿತು ಎಂದು ಸ್ಪಷ್ಟನೆ ನೀಡಿದರು.
Key words: LokSabha- security -breach -case -Do not - politics - Speaker -Om Birla.
Next Article