For the best experience, open
https://m.justkannada.in
on your mobile browser.

ಲಾರಿ-ಓಮ್ನಿ ಡಿಕ್ಕಿಯಾಗಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು.

04:39 PM May 24, 2024 IST | prashanth
ಲಾರಿ ಓಮ್ನಿ ಡಿಕ್ಕಿಯಾಗಿ ಭೀಕರ ಅಪಘಾತ  ನಾಲ್ವರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು,ಮೇ,24,2024 (www.justkannada.in): ಲಾರಿ-ಓಮ್ನಿ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಬಣಕಲ್ ಬಳಿ ನಡೆದಿದೆ.

ಬಣಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರು ಚಿತ್ರದುರ್ಗದ ಮೂಲದವರು ಎನ್ನಲಾಗಿದೆ. ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥನ ದರ್ಶನ ಪಡೆದು ಬಳಿಕ ಚಿತ್ರದುರ್ಗಕ್ಕೆ ವಾಪಸ್ ಆಗುವಾಗ ಈ ಘಟನೆ ನಡೆದಿದೆ.

ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದರೇ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Key words: Lorry, Omni, collision, Four, death

Tags :

.