HomeBreaking NewsLatest NewsPoliticsSportsCrimeCinema

ಲಾರಿ ಮಾಲೀಕರು, ಚಾಲಕರ ಮುಷ್ಕರಕ್ಕೆ ಮೈಸೂರಿನಲ್ಲಿ ಖಾಸಗಿ ಬಸ್ ಗಳಿಂದ ಬೆಂಬಲ.

01:12 PM Jan 18, 2024 IST | prashanth

ಮೈಸೂರು,ಜನವರಿ,18,2024(www.justkannada.in):  ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯ್ದೆಗೆ ದೇಶಾದ್ಯಂತ ವಿರೋಧ ತೀವ್ರಗೊಂಡಿದ್ದು ಕಾಯ್ದೆಯನ್ನ ವಾಪಸ್ ಪಡೆಯುವಂತೆ ಆಗ್ರಹಿಸಿ ಲಾರಿ ಮಾಲೀಕರು, ಚಾಲಕರ ಮುಷ್ಕರ ನಡೆಸುತ್ತಿದ್ದಾರೆ.

ಲಾರಿ ಮಾಲೀಕರು ಮತ್ತು ಚಾಲಕರ ಮುಷ್ಕರಕ್ಕೆ ಮೈಸೂರಿನಲ್ಲಿ ಖಾಸಗಿ ಬಸ್ ಗಳು ಬೆಂಬಲ ವ್ಯಕ್ತಪಡಿಸಿವೆ.  ಖಾಸಗಿ ಬಸ್ ಚಾಲಕ ಮತ್ತು ಮಾಲೀಕರು ರಸ್ತೆಗಿಳಿಯದೆ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದ್ದಾರೆ.

ನಗರದ ಆರ್ ಎಂಸಿ ಬಳಿ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ನೂರಾರು ಖಾಸಗಿ ಬಸ್ ಗಳು ನಿಂತಿದ್ದು ಈ ಮೂಲಕ  ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ನೂತನ ಕಾನೂನು ಕೇವಲ ಲಾರಿ ಚಾಲಕರಿಗೆ ಅಥವಾ ಮಾಲೀಕರಿಗೆ ಮಾತ್ರ ಅಲ್ಲ. ಇದು ರಸ್ತೆಯಲ್ಲಿ ಸಂಚಾರ ಮಾಡುವ ದ್ವಿಚಕ್ರ ವಾಹನದಿಂದ ಹಿಡಿದು ಭಾರಿ ವಾಹನಗಳವರೆಗೆ ಎಲ್ಲಾ ರೀತಿಯ ವಾಹನ ಸವಾರರಿಗೂ ಅನ್ವಯವಾಗುತ್ತದೆ.  ಹಾಗಾಗಿ ಇದು ಚಾಲಕ, ಮಾಲೀಕರಿಗೆ ಮರಣ ಶಾಸಕವಾಗಿದೆ. ಈ ಕೂಡಲೇ ಕಾಯ್ದೆ ವಾಪಸ್ ಪಡೆಯಬೇಕು ಎಂದು ವ್ಯಾಪಕ ಒತ್ತಾಯ ಕೇಳಿ ಬಂದಿದೆ.

Key words: Lorry owners- drivers- strike -supported -private buses - Mysore.

Tags :
Lorry owners- drivers- strike -supported -private buses - Mysore.
Next Article