HomeBreaking NewsLatest NewsPoliticsSportsCrimeCinema

ಶ್ರಮಿಕ ಜೀವಿ ಕ್ಷೌರಿಕ ವೃತ್ತಿಶೀಲರ ಕುರಿತು ಮಧು ಬಂಗಾರಪ್ಪ ಹಗುರ ಮಾತು-ರಘು ಕೌಟಿಲ್ಯ ಕಿಡಿ.

10:32 AM May 28, 2024 IST | prashanth

ಮೈಸೂರು,ಮೇ,28,2024 (www.justkannada.in): ನನಗೆ ಹೇರ್ ಕಟ್ ಮಾಡೋರು ಫ್ರಿ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಫ್ರಿ ಇದ್ದರೇ ಬಂದು ಕಟಿಂಗ್ ಮಾಡಲಿ ಎಂದು ಹೇಳಿಕೆ ನೀಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ದ ಬಿಜೆಪಿ ಮುಖಂಡ ರಘು ಕೌಟಿಲ್ಯ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಘು ಕೌಟಿಲ್ಯ, 'ಶಿಕ್ಷಣ’ ಪರಿಶುಭ್ರತೆಗೆ ಕಪ್ಪು ಚುಕ್ಕೆ ಸಂಕೇತಿಸುವ ವಿಕೃತಿ ಅಳವಡಿಸಿಕೊಂಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ‘ಮುಖಕ್ಕೆ ಕನ್ನಡಿ ಹಿಡಿದು ತಿಳಿಹೇಳಿದ’ ನಮ್ಮ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರವರ ಸಲಹೆಯನ್ನು ಸಕರಾತ್ಮಕವಾಗಿ ಸ್ವೀಕರಿಸುವ ಬದಲು ವಿಚಲಿತಗೊಂಡಂತೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವರು.

ಹೇರ್ ಕಟ್ ಮಾಡೋರು ಬಿಜಿ ಇದ್ದಾರೆ" ಎಂದು ಹೇಳುವ ಮೂಲಕ ಸಂಕಷ್ಟಿತ ಶ್ರಮಿಕ ಜೀವಿಗಳಾದ ‘ ಕ್ಷೌರಿಕ ವೃತ್ತಿಶೀಲ’ರ ಕುರಿತು ಹಗುರವಾಗಿ ಮಾತನಾಡಿದ್ದಾರೆ ಎಂದು ರಘು ಕೌಟಿಲ್ಯ ಅಸಮಾಧಾನ ವ್ಯಕ್ತಪಡಿಸಿದರು.

ಮಧು ಬಂಗಾರಪ್ಪನವರು ಕೇಶಾಲಂಕಾರ ಮಾಡಿಕೊಳ್ಳದಿದ್ದರೂ ಪರವಾಗಿಲ್ಲ ‘ಹೆಂಡದ ಮಾರಯ್ಯ’ ವೃತ್ತಿ ತ್ಯಜಿಸಿ ‘ಶರಣ ಶ್ರೇಷ್ಠ’ನಾಗಲು ಪ್ರಭಾವಬೀರಿದ ಅಣ್ಣ ಬಸವಣ್ಣನವರ ಬಲಗೈಯಂತಿದ್ದ ಮಹಾಶರಣ ಹಡಪದ ಅಪ್ಪಣ್ಣನ ಸಮಾಜವೂ ಸೇರಿದಂತೆ ಇತರ ವೃತ್ತಿನಿರತ ಕಾಯಕ ಸಮುದಾಯಗಳನ್ನು ಗೌರವದಿಂದ ಕಾಣುವ ಸಂಸ್ಕಾರ ಬೆಳಸಿಕೊಳ್ಳಲಿ ಎಂದು ರಘು ಕೌಟಿಲ್ಯ ವಾಗ್ದಾಳಿ ನಡೆಸಿದರು.

Key words: Madhu Bangarappa , BJP, Raghu koutilya

Tags :
Madhu Bangarappa- Barber professionraghu-koutilya
Next Article