For the best experience, open
https://m.justkannada.in
on your mobile browser.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಾತೆ ನಿರ್ವಹಣೆಯಲ್ಲಿ  ವಿಫಲ, ಅವರನ್ನ ಬದಲಾಯಿಸಿ : ವಿಶ್ವನಾಥ್.

02:16 PM Apr 10, 2024 IST | mahesh
ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಾತೆ ನಿರ್ವಹಣೆಯಲ್ಲಿ  ವಿಫಲ  ಅವರನ್ನ ಬದಲಾಯಿಸಿ   ವಿಶ್ವನಾಥ್

ಮೈಸೂರು‌, ಏ. 10, 2024 (www.justkannada.in news )  :  ರಾಜ್ಯ ಸರಕಾರ ನಡೆಸಿದ 5,8,9ನೇ ತರಗತಿ ಬೋರ್ಡ್ ಪರೀಕ್ಷೆ ಕಾನೂನು ಬಾಹಿರ. ಇದು ಶಿಕ್ಷಣ ಹಕ್ಕು ಕಾಯಿದೆ ಉಲ್ಲಂಘನೆ. ಇದರಿಂದ ಈಗ ಎರಡನೇ ಬಾರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಿಂದ ಚೀಮಾರಿ ಹಾಕಿಸಿಕೊಂಡಿದೆ ಎಂದು ಮಾಜಿ ಶಿಕ್ಷಣ ಸಚಿವ ಅಡಗೂರು ಎಚ್.ವಿಶ್ವನಾಥ್‌ ಟೀಕಿಸಿದರು.

ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಬುಧವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೇಳಿದಿಷ್ಟು..

ಈ ಹಿಂದೆ ಬಿಜೆಪಿ ಸರ್ಕಾರ ಕೂಡ ಇದನ್ನೇ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಕೂಡ ಇದೆ ನೀತಿ ಅನುಸರಿಸಿದೆ. ಪ್ರಶ್ನೆ ಪತ್ರಿಕೆಯಲ್ಲಿಯೂ ಕಿಕ್ ಬ್ಯಾಕ್ ಪಡೆಯಲು ಸರ್ಕಾರ ಮುಂದಾಗಿದೆ. ಪ್ರಶ್ನೆ ಪತ್ರಿಕೆ ಟೆಂಡರ್ ಒಬ್ಬನೇ ವ್ಯಕ್ತಿಗೆ ನೀಡಲಾಗಿದೆ. ಆಮೂಲಕ ಪರೀಕ್ಷೆಯ ಪಾವಿತ್ರತೆಯನ್ನ ಸರ್ಕಾರ ಹಾಳು ಮಾಡಿದೆ.

ಯದುವೀರ್‌ ಗೆ ಓಟಾಕುವ ಮೂಲಕ ಋಣ ತೀರಿಸಿ : ಎಚ್.ವಿಶ್ವನಾಥ್

ಹಲವು ವಿನೂತನ ಕಾರ್ಯಕ್ರಮ ಮೂಲಕ ನಾವು ಮೊದಲಿದ್ದೆವು, ಇತ್ತೀಚಿನ ದಿನಗಳಲ್ಲಿ ತೀರ ಕೆಳಗಡೆ ಹೋಗಿದ್ದೇವೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಾತೆ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಈಗಲಾದರೂ ಸರ್ಕಾರ ತನ್ನ ಒಣ ಪ್ರತಿಷ್ಠೆ ಬಿಟ್ಟು ಪರೀಕ್ಷೆಗಳನ್ನ ರದ್ದು ಮಾಡಬೇಕು. ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಚೀಮಾರಿ ಹಾಕಿದೆ. ಕೂಡಲೇ ಶಿಕ್ಷಣ ಸಚಿವರನ್ನ ಬದಲಾಯಿಸಿ.

ಶಿಕ್ಷಣ ಗ್ಯಾರಂಟಿ ಮಕ್ಕಳಿಗೆ ತುಂಬಾ ಮುಖ್ಯ. ಸರ್ಕಾರ ಶಾಲಾ ಶಿಕ್ಷಣದ ಗ್ಯಾರಂಟಿ ಕೂಡ ನೀಡಬೇಕು. NEP ಉಲ್ಲಂಘನೆ ಮಾಡಿರುವುದೇ ಇದಕ್ಕೆಲ್ಲ ಕಾರಣ.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿಕೆ.

key words :  Madhu Bangarappa,  failed , to handle , the portfolio

ENGLISH SUMMARY :

The class 5, 8 and 9 board exams conducted by the state government are illegal. This is a violation of the Right to Education Act. Former education minister Adagur H Vishwanath said that this is the second time that the state government has been reprimanded by the Supreme Court.

Education Minister Madhu Bangarappa failed to handle the portfolio. At least now the government should give up its prestige and cancel the exams. The Supreme Court has pulled up the state government. Change the education minister immediately.

Tags :

.