HomeBreaking NewsLatest NewsPoliticsSportsCrimeCinema

ಮಧ್ಯಪ್ರದೇಶ: ಶಿವರಾಜ್ ಸಿಂಗ್ ಚೌಹಾಣ್, ಕಮಲ್ ನಾಥ್ ಮುನ್ನಡೆ, ಇಲ್ಲಿಗೆ ಹೈಪ್ರೊಫೈಲ್ ಅಭ್ಯರ್ಥಿಗಳ ಮಾಹಿತಿ…

11:15 AM Dec 03, 2023 IST | thinkbigh

ಬೆಂಗಳೂರು, ಡಿಸೆಂಬರ್ 03, 2023 (www.justkannada.in): ಮಧ್ಯಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕಮಲ್ ನಾಥ್ ಮುನ್ನಡೆ ಸಾಧಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿದ್ದು, ಮುಂದಿನ ಸಿಎಂ ಯಾರಾಗುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸದ್ಯದ ಮಾಹಿತಿ ಪ್ರಕಾರ ಮಧ್ಯ ಪ್ರದೇಶದಲ್ಲಿ ಬಿಜೆಪಿ 157 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 70 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ಪರ್ಧಿಸುತ್ತಿರುವ ಸೆಹೋರ್ ಜಿಲ್ಲೆಯ ಬುಧ್ನಿ ಕ್ಷೇತ್ರದಲ್ಲಿ ಅವರು ಮುನ್ನಡೆ ಸಾಧಿಸುತ್ತಿದ್ದಾರೆ. ಈ ಕ್ಷೇತ್ರ ಶಿವರಾಜ್ ಅವರ ಭದ್ರಕೋಟೆ ಎಂದು ಪರಿಗಣಿಸಲಾಗಿದೆ.

ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಜಿತು ಪಟ್ವಾರಿ ಅವರು ಬಿಜೆಪಿಯ ಹಿರಿಯ ನಾಯಕ ಮಧು ವರ್ಮಾ ಅವರೊಂದಿಗೆ ನೇರ ಸ್ಪರ್ಧೆಯಲ್ಲಿದ್ದಾರೆ. ಮಧ್ಯಪ್ರದೇಶದ ವಿಐಪಿ ಅಭ್ಯರ್ಥಿಗಳಲ್ಲಿ ಮತ್ತೊಬ್ಬರು ನರೋತ್ತಮ್ ಮಿಶ್ರಾ ದಾತಿಯಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ನರೋತ್ತಮ್ ಮಿಶ್ರಾ ನಾಲ್ಕನೇ ಬಾರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

Tags :
Kamal Nath leakedMadhya Pradesh: Shivraj Singh Chouhan
Next Article