For the best experience, open
https://m.justkannada.in
on your mobile browser.

ಬಹುಮತವಿರುವ ಸರ್ಕಾರವನ್ನ ಅಭದ್ರ ಮಾಡಲ್ಲ- ಮಾಜಿ ಸಚಿವ ಸುನೀಲ್ ಕುಮಾರ್.

03:40 PM May 15, 2024 IST | prashanth
ಬಹುಮತವಿರುವ ಸರ್ಕಾರವನ್ನ ಅಭದ್ರ ಮಾಡಲ್ಲ  ಮಾಜಿ ಸಚಿವ ಸುನೀಲ್ ಕುಮಾರ್

ಬೆಂಗಳೂರು, ಮೇ,16, 2024 (www.justkannada.in): ಅಪರೇಷನ್ ಕಮಲ ಕುರಿತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸುನೀಲ್ ಕುಮಾರ್, ನಾವು ಯಾವುದೇ ಕಾರಣಕ್ಕೂ ಸರ್ಕಾರ ಅಭದ್ರ ಮಾಡಲ್ಲ ಎಂದು ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸುನೀಲ್ ಕುಮಾರ್, ಬಹುಮತ ಇರುವ ಸರ್ಕಾರವನ್ನ ಬಿಜೆಪಿ ಅಭದ್ರ ಮಾಡಲ್ಲ. ಆದರೆ, ಕಾಂಗ್ರೆಸ್ ನಾಯಕತ್ವದಲ್ಲಿನ ಗೊಂದಲದ ಭಾರಕ್ಕೆ ಅವರೇ ಕುಸಿದು ಬಿದ್ದರೆ ಆಮೇಲೆ ನಾವು ನೋಡುತ್ತೇವೆ. ನಾವು ಯಾವುದೇ ಕಾರಣಕ್ಕೂ ಸರ್ಕಾರ ಅಭದ್ರ ಮಾಡಲ್ಲ ಎಂದರು.

ಸಿದ್ದರಾಮಯ್ಯ ವಿರುದ್ಧ ಬಹಳ ಶಾಸಕರು ಮಾತಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಅವರ ಶಾಸಕರೇ ಮಾತನಾಡುತ್ತಿದ್ದಾರೆ. ಯಾರ ಭಾರದಿಂದ ಸರ್ಕಾರ ಕುಸಿಯುತ್ತೋ ನೋಡೋಣ. ಸರ್ಕಾರ ಡಿಸಿಎಂ ಡಿಕೆ ಶಿವಕುಮಾರ್  ಅವರ ಭಾರದಿಂದ ಕುಸಿಯುತ್ತೋ? ಸಿಎಂ ಭಾರದಿಂದ ಕುಸಿಯುತ್ತೋ ಬಿಜೆಪಿ ಕಾದು ನೋಡುತ್ತೆ. ಸರ್ಕಾರ ಅದರದ್ದೇ ಭಾರದಿಂದ ಕುಸಿದ್ರೆ ಸುಮ್ಮನೆ ಇರಬೇಕಾ? ವಿಪಕ್ಷವಾಗಿ ನಾವು ಸುಮ್ಮನೆ ಕುಳಿತುಕೊಂಡಿರಲು ಆಗುತ್ತಾ? ಎಂದು ಹೇಳಿದರು.

Key words: majority- government - Former minister- Sunil Kumar

Tags :

.