For the best experience, open
https://m.justkannada.in
on your mobile browser.

ಯುಎಇನಲ್ಲಿ ಪುರುಷ ನರ್ಸ್ ಗಳಿಗೆ ಉದ್ಯೋವಕಾಶ: ಅರ್ಜಿ ಆಹ್ವಾನ

05:39 PM Aug 02, 2024 IST | prashanth
ಯುಎಇನಲ್ಲಿ ಪುರುಷ ನರ್ಸ್ ಗಳಿಗೆ ಉದ್ಯೋವಕಾಶ   ಅರ್ಜಿ ಆಹ್ವಾನ

ಬೆಂಗಳೂರು, ಆಗಸ್ಟ್ 2,2024 (www.justkannada.in): ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ  ವತಿಯಿಂದ ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಇ)ನಲ್ಲಿ ಪುರುಷ ನರ್ಸ್ ಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಇರುವರಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಅರ್ಹರಿಗೆ ಈ ಉದ್ಯೋಗ ಅವಕಾಶವನ್ನು ಒದಗಿಸಲಿದೆ.

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು,  ಈ ಹಿಂದೆ ಸ್ಲೋವಾಕಿಯಾದಲ್ಲಿ ಹಲವಾರು ಕನ್ನಡಿಗರಿಗೆ ನಿಗಮದ ಮೂಲಕ ಉದ್ಯೋಗ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನಲ್ಲೇ ಯುಎಇ ನಲ್ಲಿ ಪುರುಷ ನರ್ಸ್ ಗಳಿಗೆ ಉದ್ಯೋಗ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಹಾಗೆಯೇ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತ ನಾಯಕ್ ಅವರು ಈ  ಯೋಜನೆಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.

ಯುಎಇನಲ್ಲಿ ಪುರುಷ ನರ್ಸಿಂಗ್ ಹುದ್ದೆ ಬಯಸುವವರು 40 ವರ್ಷದೊಳಗಿನವರಾಗಿರಬೇಕು. 2 ವರ್ಷ ಅನುಭವ  ಹೊಂದಿರಲೇಬೇಕು.  ಆಯ್ಕೆಯಾಗುವವರಿಗೆ 5 ಸಾವಿರ ಎಇಡಿ(ಮಾಸಿಕ 1,11,000. ರೂ ವೇತನ), 30 ದಿನ  ವೇತನ ರಹಿತ ಸಂಬಳ, ಕಂಪನಿ ವತಿಯಿಂದಲೇ ವೈದ್ಯಕೀಯ ವಿಮೆ, ಸಾರಿಗೆ ಮತ್ತು ವಿಮಾನಯಾನ ಟಿಕೆಟ್, ಆಹಾರ ಸೌಲಭ್ಯ, ವೀಸಾ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.

ಇದು ಸಂಪೂರ್ಣವಾಗಿ ಉಚಿತವಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ಆನ್‌ ಲೈನ್ ಮೂಲಕ ಸಂದರ್ಶನ ನಡೆಯಲಿದೆ. ಸಂದರ್ಶನದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಕೌಶಲ್ಯಾಭಿವೃದ್ದಿ ನಿಗಮ ತಿಳಿಸಿದೆ.

ಕೆಎಸ್‌ ಡಿಸಿ ಈ ಹಿಂದೆ ಸ್ಲೋವಾಕಿಯಾದಲ್ಲಿ ಐಟಿ, ಡಿಪ್ಲೊಮಾ, ಐಟಿಐ ಮತ್ತು ಇತರ ಉದ್ಯೋಗ-ಆಧಾರಿತ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಹಲವಾರು ಯುವಕರಿಗೆ ಉದ್ಯೋಗಗಳನ್ನು ಒದಗಿಸಿದೆ.  ಕೆಎಸ್‌ಡಿಸಿ ಹಂಗೇರಿಯಲ್ಲಿ 37 ಡ್ರೈವರ್ ಗಳಿಗೆ ಉದ್ಯೋಗಗಳನ್ನು ಒದಗಿಸಿತ್ತು. ಜೊತೆಗೆ ವೆಲ್ಡರ್‌ ಗಳಿಗೆ ಮಾರಿಷಸ್‌ ನಲ್ಲಿ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಕೆಎಸ್‌ ಡಿಸಿ ವೆಬ್ಸೈಟ್ http://imck.kaushalkar.com ಭೇಟಿ ನೀಡಬಹುದು ಮತ್ತು hr.imck@gmail.com ವೆಬ್ಸೈಟ್  ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಈ ವಾಟ್ಸಪ್ಪ್ ನಂಬರ್ಗಳ 9606492213/ 9606492214 ಮೂಲಕ ವಿವರಗಳನ್ನು ಪಡಯಬಹುದು ಹಾಗೂ ಈ ವಿಳಾಸಕ್ಕೆ ಇಂಟರ್ ನ್ಯಾಷನಲ್ ಮೈಗ್ರೇಶನ್ ಸೆಂಟರ್– ಕರ್ನಾಟಕ (IMC-K), ನಾಲ್ಕನೇ ಮಹಡಿ, ಕಲ್ಯಾಣ ಸುರಕ್ಷಾ ಭವನ, ಐಟಿಐ ಕಾಲೇಜು ಕ್ಯಾಂಪಸ್, ಡೇರಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು–560029 ಭೇಟಿ ನೀಡಬಹುದು.

ENGLISH SUMMARY...

KSDC TO FACILITATE MALE NURSES TO LAND JOBS IN UAE

* KSDC to conduct online interviews

Bengaluru, August 2: After facilitating hundreds of unemployed youths find jobs abroad, the Karnataka Skill Development Corporation (KSDC) has taken another initiative to help male nursing graduates from Karnataka to land well-paid nursing jobs in the United Arab Emirates (UAE). Thanks to the efforts of Medical Education, Skill Development and Livelihood Minister Dr. Sharan Prakash Patil, more and more unemployed youths are getting job opportunities in foreign countries.

The online interviews for the job will be held in August 2024 and the interview dates will be shared with shortlisted candidates. There will be no recruitment charges. And each successful candidate will get remuneration up to 5,000 AED (Rs 1.11 lakh per month).

The KSDC had earlier facilitated several youths who have completed BE, diploma, ITI and other job-oriented courses land jobs in Slovakia. The KSDC has also facilitated jobs for 37 drivers in Hungary besides helping welders get jobs in Mauritius and continuing recruitment process for other technicians and blue collar jobs. The KSDC, after the instructions from Minister Dr. Sharan Prakash Patil, has been making efforts in coordination with the External Affairs Ministry to meet the human resources demand from European, gulf and other countries.

The KSDC has invited online applications for the positions of male nurses in the UAE from the eligible nursing graduates with over two years of experience. The candidates need to register on KSDC website http://imck.kaushalkar.com and send their CV and documents to hr.imck@gmail.com The candidates can contact or WhatsApp on 9606492213/ 9606492214 and for more details they can visit International Migration Center – Karnataka (IMC-K), 4TH Floor, Kalyana Suraksha Bhavan, ITI College Campus, Dairy Circle, Bannerghatta Main Road, Bengaluru – 560029.

Key words: Male Nurses, job, UAE, KSDC, Applications

Tags :

.