For the best experience, open
https://m.justkannada.in
on your mobile browser.

ಖುದ್ದು ಭೇಟಿಯಾಗಲು ಸಮಯ ಕೇಳಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ.

06:10 PM Apr 25, 2024 IST | prashanth
ಖುದ್ದು ಭೇಟಿಯಾಗಲು ಸಮಯ ಕೇಳಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು,ಏಪ್ರಿಲ್,25,2024 (www.justkannada.in): ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಟೀಕೆ, ಹಾಗೂ ಕರ್ನಾಟಕದಲ್ಲಿ ಮುಸ್ಲೀಮರಿಗೆ ಒಬಿಸಿ ಮೀಸಲಾತಿ ಹಂಚಿಕೆ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಈ ಬಗ್ಗೆ ಖುದ್ದು ಭೇಟಿಯಾಗಿ ಚರ್ಚಿಸಲು ಸಮಯ ಕೇಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಸುಮಾರು 2 ಪುಟಗಳ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ , ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೋದಿ ನಿರಂತರ ಟೀಕೆ ಮಾಡುತ್ತಿದ್ದು, ಕಾಂಗ್ರೆಸ್ ಗ್ಯಾರಂಟಿಗಳನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಅವರಿಗೆ ತಪ್ಪು ಮಾಹಿತಿಯನ್ನ ನೀಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವುದಾಗಿದೆ. ಹೀಗಾಗಿ ನಿಮ್ಮ ಭೇಟಿಗೆ ಅವಕಾಶ ಸಿಕ್ಕರೆ, ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ತಿಳಿಸಿ ಹೇಳುತ್ತೇನೆ ಎಂದಿದ್ದಾರೆ.

ಹಾಗೆಯೇ  ಮೀಸಲಾತಿ ಬಗ್ಗೆ ಖುದ್ದಿ ಭೇಟಿಯಾಗಿ ಚರ್ಚೆಗೆ ಸಿದ್ದ .  ನಿಮ್ಮ ಸಾಧನೆ ನೋಡಿ ಈ ಹೇಳಿಕೆಗಳನ್ನ ನಿರೀಕ್ಷಿಸಿದ್ದವು. ನಿಮ್ಮ ಸರ್ಕಾರ ಬಂಡವಾಳ ಶಾಹಿಗಳ ಸಾಲಮನ್ನಾ ಮಾಡಿತ್ತು. ಬಡವರ ಹಣವನ್ನ ಶ್ರೀಮಂತರಿಗೆ ವರ್ಗಾವಣೆ ಮಾಡಿದ್ದೀರಿ  ನಿಮ್ಮ ಮಿತ್ರರಂತೆ ದೇಶ ವಿಭಜಿಸಬೇಡಿ ಎಂದು ಖರ್ಗೆ ಕಿಡಿಕಾರಿದ್ದಾರೆ.

ಪ್ರಧಾನಿ  ಮೋದಿ ಅವರ  ಇತ್ತೀಚಿನ ಭಾಷಣಗಳಲ್ಲಿ ಬಳಸಿದ ಭಾಷೆಯಿಂದ ನನಗೆ ಆಘಾತವಾಗಲೀ ಅಥವಾ ಆಶ್ಚರ್ಯವಾಗಲೀ ಆಗಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನವನ್ನು ನೋಡಿದ ನಂತರ ನೀವು ಮತ್ತು ನಿಮ್ಮ ಪಕ್ಷದ ಇತರ ನಾಯಕರು ಈ ರೀತಿ ಮಾತನಾಡಲು ಪ್ರಾರಂಭಿಸುತ್ತೀರಿ ಎಂದು ನಿರೀಕ್ಷಿಸಲಾಗಿತ್ತು ಎಂದು  ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.

Key words: Mallikarjuna Kharge, PM Modi, meet, letter

Tags :

.