For the best experience, open
https://m.justkannada.in
on your mobile browser.

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ  ಅವರ ಗೆಲುವು ಶತಸಿದ್ಧ-ಸಿ.ಎಂ ಸಿದ್ದರಾಮಯ್ಯ ಭರವಸೆ.

06:28 PM Apr 20, 2024 IST | prashanth
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ  ಅವರ ಗೆಲುವು ಶತಸಿದ್ಧ ಸಿ ಎಂ ಸಿದ್ದರಾಮಯ್ಯ ಭರವಸೆ

ಮಂಡ್ಯ, ಏಪ್ರಿಲ್,20,2024 (www.justkannada.in):  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ  ಅವರ ಗೆಲುವು ಶತಸಿದ್ಧ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಭರವಸೆಯ ಮಾತುಗಳನ್ನಾಡಿದರು.

ಮಂಡ್ಯ ಲೋಕಸಭಾ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪರವಾಗಿ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಒಮ್ಮನಸ್ಸಿನಿಂದ, ಒಟ್ಟಿಗೇ ಕಾಂಗ್ರೆಸ್ ಗೆಲ್ಲಿಸಲು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳು ಬೀಳುವುದು ಖಚಿತ ಎಂದರು.

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಮಾಡಿದ್ದೇನು?

ಕೆಂಪೇಗೌಡ ಜಯಂತಿ ಆರಂಭಿಸಿದ್ದು ನಾವು, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ನಾವು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ನಾವು.  ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮಾಡಿದ್ದೇನು ಹೇಳಿ ಎಂದು ಸಿ.ಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಪ್ರತಾಪ್ ಸಿಂಹ, ಸದಾನಂದಗೌಡರಿಗೆ ಟಿಕೆಟ್ ತಪ್ಪಿಸಿ ಒಕ್ಕಲಿಗರಿಗೆ ಅನ್ಯಾಯ ಮಾಡಿದ್ದು ಯಾರು ದೇವೇಗೌಡರೇ? ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಒಕ್ಕಲಿಗ ಸಮುದಾಯದ ನಾಯಕರಿಗೆ ಅತಿ ಹೆಚ್ಚು ಅನ್ಯಾಯ ಆಗಿರುವುದು ಬಿಜೆಪಿ, ಜೆಡಿಎಸ್ ನಿಂದಲೇ ಎಂದು ವಿವರಿಸಿದರು.

ಕೆ.ಆರ್.ಪೇಟೆ ಕೃಷ್ಣರನ್ನು ಸ್ಮರಿಸಿ ಶ್ಲಾಘಿಸಿದ ಸಿಎಂ

ಕೆ.ಆರ್.ಪೇಟೆ ಕೃಷ್ಣ ಅವರು ಅತ್ಯಂತ ಸಜ್ಜನರೂ, ಜನಪರ ಕಾಳಜಿ ಇದ್ದವರೂ ಆಗಿದ್ದರು. ಇವರನ್ನು ಮಂತ್ರಿ ಮಾಡಬೇಕು ಎನ್ನುವ ಇಚ್ಚೆ ನಮಗೆಲ್ಲರಿಗೂ ಇತ್ತು.‌ ಆದರೆ, ಮಂತ್ರಿ ಮಾಡಲು ದೇವೇಗೌಡರು ಒಪ್ಪಿರಲಿಲ್ಲ. ಆಗ ಸ್ಪೀಕರ್ ಆಗಲು ಸಲಹೆ ನೀಡಿದೆ ಎಂದು ತಮ್ಮ ಮತ್ತು ಕೆ.ಆರ್.ಪೇಟೆ ಕೃಷ್ಣ ಅವರ ನಡುವಿನ ಒಡನಾಟವನ್ನು ಸ್ಮರಿಸಿದರು.

ಮೋದಿ ಅವರು ಹೇಳಿದ್ದರಲ್ಲಿ ಒಂದೇ ಒಂದು ಭರವಸೆ ಈಡೇರಿಸಿದ್ದರೆ ತೋರಿಸಲಿ ನೋಡೋಣ: ಸಿ.ಎಂ ಸವಾಲು

ಮೋದಿ ಅವರು ಹೇಳಿದ್ದರಲ್ಲಿ ಒಂದೇ ಒಂದು ಭರವಸೆಯನ್ನು ಈಡೇರಿಸಿದ್ದರೆ ತೋರಿಸಲಿ ನೋಡೋಣ ಎಂದು ಸಿ.ಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ಕೇವಲ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ವಂಚಿಸುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಮೋದಿಯವರಿಗೆ ಕರ್ನಾಟಕ ನೆನಪಾಗುವುದೇ ಚುನಾವಣೆ ಬಂದಾಗ. ಬರಗಾಲ ಬಂದಾಗಲೂ ರಾಜ್ಯದ ಕಡೆ ತಲೆ ಹಾಕಲಿಲ್ಲ. ಪ್ರವಾಹ ಬಂದಾಗ ರಾಜ್ಯದ ಕಡೆ ತಿರುಗಿಯೂ ನೋಡಲಿಲ್ಲ. ಚುನಾವಣೆ ಬಂತು ನೋಡಿ ಮೋದಿ ಓಡೋಡಿ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೋದಿಯವರನ್ನು ವಾಚಾಮಗೋಚರವಾಗಿ ಟೀಕಿಸುತ್ತಿದ್ದ ದೇವೇಗೌಡರು ಈಗ ಮೋದಿಗೂ ತಮಗೂ ಅವಿನಾಭಾವ ಸಂಬಂಧ ಇದೆ ಎನ್ನುತ್ತಿದ್ದಾರೆ. ಇವರಿಬ್ಬರ ನಡುವಿನ ಸಂಬಂಧ ಅಷ್ಟು ಚೆನ್ನಾಗಿದ್ದರೆ ಮೋದಿಯವರಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ದೇವೇಗೌಡರು ಸರಿಪಡಿಸಲಿ ನೋಡೋಣ. ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ ನೋಡೋಣ ಎಂದು ಸವಾಲು ಹಾಕಿದರು.

ರಾಜ್ಯದ ರೈತರಿಗೆ ಕೇಂದ್ರದಿಂದ ಇದುವರೆಗೂ ಒಂದೇ ಒಂದು ರೂಪಾಯಿ ಬರಗಾಲದ ಹಣ ಬಂದಿಲ್ಲ. ಅದು ನಮ್ಮ ರಾಜ್ಯದ ಪಾಲು. ನಮ್ಮ ಪಾಲನ್ನು ಕೊಡದೆ ಸತಾಯಿಸುತ್ತಿರುವ ಮೋದಿಯವರಿಗೆ ಹೇಳಿ ಈ ಹಣ ಕೊಡಿಸಲಿ ಎಂದು ಮತ್ತೊಂದು ಸವಾಲು ಹಾಕಿದರು.

ಇದ್ಯಾವುದನ್ನೂ ನಿಮ್ಮಿಂದ ಮಾಡಿಸಲು ಸಾಧ್ಯವಿಲ್ಲ ಎಂದಾದರೆ ಅದು ರಾಜ್ಯದ ಜನತೆಗೆ ಮಾಡಿದ ದ್ರೋಹವಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ENGLISH SUMMARY...

Who was behind dissuading tickets for Pratap Simha and Sadananda Gowda and the injustice meted out to Vokkaligas Deve Gowdaji? CM Siddaramaiah's Question.

Congress candidate Venkataramane Gowda's victory in Mandya Lok Sabha constituency is certain: CM Siddaramaiah

Deve Gowda had not agreed to make KR Pete Krishna a minister. He was advised to become speaker then: C.M

We began celebrating Kempegowda Jayanti, we established Kempegowda Development Authority. We named the International Airport after Kempegowda: Tell me what Kumaraswamy did as Chief Minister: CM asks

Mandya (K.R.Pete) April 20: CM Siddaramaiah said that the victory of Congress candidate Venkataramane Gowda in Mandya Lok Sabha constituency is certain.

He was speaking after inaugurating Prajadhwani-2 on behalf of Mandya Lok Sabha candidate
Venkataramanegowda (Star Chandru).

All the leaders of the Congress party are working together to make Congress win in K.R.pete. Therefore, it is certain that Congress will get more votes in this constituency, he said.

What did Kumaraswamy do as Chief Minister?

It was our Government that began to celebrate Kempegowda Jayanti, we established Kempegowda Development Authority. We are the ones who named the international airport after Kempegowda: What did Kumaraswamy do as Chief Minister? The CM asked.

Who was behind dissuading tickets for Pratap Simha and Sadananda Gowda and the injustice meted out to Vokkaligas Deve Gowdaji ? , The Chief Minister explained that it is the BJP and JDS has done the greatest injustice to the vokkaliga community.

CM recalls and commends K.R. Pete Krishna

KR Pete Krishna was a gentleman and concerned about people. We all wanted to make him a minister. However, Devegowda did not agree. He recalled the association between him and KR Pete Krishna and said that he had advised him to become the speaker then.

Let them prove if Modi has fulfilled at least one promise: CM challenges

The CM challenged Modi to prove if he has fulfilled even one of his promises.

BJP is good at provoking people emotionally.
Modi remembers Karnataka only when elections come. Even when the state suffered from drought and floods Modi did not visit the state. He quipped that Modi is rushing to the State when elections were declared.

Deve Gowda, who used to verbally criticize Modi, is now saying that he and Modi have an inseparable relationship. If the relationship between the two is so good, let Deve Gowda correct the injustice done to the state by Modi. He challenged him to get permission for the Mekedatu project.

Farmers of the state have not received even a single rupee as drought relief from the Centre. That is the share of our state. He said ' let him speak to Modi, who is making us suffer by not providing drought relief and get our share.

If you cannot do this, is it not a betraying the people of the state, he asked.

Key words: mandya, Congress, CM,  Siddaramaiah

Tags :

.