For the best experience, open
https://m.justkannada.in
on your mobile browser.

ನನಗೆ ಅಭೂತಪೂರ್ವ ಬೆಂಬಲ: ಮೋದಿ ಮತ್ತೆ ಪ್ರಧಾನಿಯಾಗೋದು ನನ್ನ ಗುರಿ- ಹೆಚ್.ಡಿ ಕುಮಾರಸ್ವಾಮಿ.

05:04 PM Apr 04, 2024 IST | prashanth
ನನಗೆ ಅಭೂತಪೂರ್ವ ಬೆಂಬಲ  ಮೋದಿ ಮತ್ತೆ ಪ್ರಧಾನಿಯಾಗೋದು ನನ್ನ ಗುರಿ  ಹೆಚ್ ಡಿ ಕುಮಾರಸ್ವಾಮಿ

ಮಂಡ್ಯ,ಏಪ್ರಿಲ್,4,2024 (www.justkannada.in): ಮಂಡ್ಯದಲ್ಲಿ ಜನರಿಂದ ನನಗೆ ಅಭೂತ ಪೂರ್ವ ಬೆಂಬಲ ಸಿಕ್ಕಿದೆ.  ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ನನ್ನ ಗುರಿ ಎಂದು ಮಂಡ್ಯ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ನುಡಿದರು.

ಇಂದು ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಈ ಹಿಂದೆ ನಾನು ಬಿಎಸ್ ವೈ ಮೈತ್ರಿ ಸರ್ಕಾರದಿಂದ ಒಳ್ಳೆಯ ಆಡಳಿತ ನೀಡಿದ್ದವು. ಒಳ್ಳೆಯ ಆಡಳಿತದಿಂದ ಜನಮನ ಸೆಳೆದಿದ್ದೆ. ಈಗ ಜನರಿಂದ ನನಗೆ ಅಭೂತ ಪೂರ್ವ ಬೆಂಬಲ ಸಿಕ್ಕಿದೆ ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಪಾತ್ರ ದೊಡ್ಡದು.  ಅವರೇ ದೆಹಲಿ ನಾಯಕರ ಭೇಟಿಗೆ ಕರೆದೊಯ್ದಿದ್ದರು . ಮಂಡ್ಯ ನೋಡಲು ಖುದ್ದು ಪ್ರಮೋದ್ ಸಾವಂತ್ ಬಂದಿದ್ದಾರೆ.  ಬಿಎಸ್ ವೈ ಮಂಡ್ಯವನ್ನ ತಮ್ಮ ತವರು ಮನೆ ಎಂದಿದ್ದಾರೆ ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಮಂಡ್ಯ. ಮಂಡ್ಯಕ್ಕೆ ಹೆಚ್.ಡಿಕೆ ಕೊಡುಗೆ ಏನು ಅಂತಾ ಕೇಳ್ತಾರೆ. ನಾನು ರೈತರ ಹಿಂದೆ ನಿಂತು ಬೆಂಬಲ ಕೊಟ್ಟಿದ್ದೇನೆ ಎಂದರು.

Key words: mandya, JDS, HD Kumaraswamy

Tags :

.