For the best experience, open
https://m.justkannada.in
on your mobile browser.

ಮಂಡ್ಯ ನಗರಸಭೆಯಲ್ಲಿ ಮೇಲುಗೈ ಸಾಧಿಸಿದ ಹೆಚ್ ಡಿಕೆ:  ಮತ್ತೆ ಅಧಿಕಾರ ಹಿಡಿದ ಜೆಡಿಎಸ್

01:13 PM Aug 28, 2024 IST | prashanth
ಮಂಡ್ಯ ನಗರಸಭೆಯಲ್ಲಿ ಮೇಲುಗೈ ಸಾಧಿಸಿದ ಹೆಚ್ ಡಿಕೆ   ಮತ್ತೆ ಅಧಿಕಾರ ಹಿಡಿದ ಜೆಡಿಎಸ್

ಮಂಡ್ಯ,ಆಗಸ್ಟ್,28,2024 (www.justkannada.in): ಮಂಡ್ಯ ನಗರಸಭೆಯಲ್ಲಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದ್ದು ಈ ಮೂಲಕ ಸಚಿವ ಚಲುವರಾಯಸ್ವಾಮಿಗೆ ಠಕ್ಕರ್ ಕೊಟ್ಟು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮೇಲುಗೈ ಸಾಧಿಸಿದ್ದಾರೆ.

ಇಂದು ನಡೆದ ಮಂಡ್ಯ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ನ ನಾಗೇಶ್ ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಜೆಡಿಎಸ್ 2ನೇ ಅವಧಿಗೆ ಅಧಿಕಾರಕ್ಕೇರಿದೆ.

ಒಟ್ಟು 35 ಸದಸ್ಯರು, ಸಂಸದರು ಶಾಸಕರಿಗೆ ಮತದಾನದ ಹಕ್ಕು ಇತ್ತು.  ಜೆಡಿಎಸ್ ಪರ 19 ಕಾಂಗ್ರೆಸ್ ಪರ 18 ಮತಗಳು ಚಲಾವಣೆಯಾಗಿವೆ.

Key words: Mandya, Municipal Council, election, JDS, power

Tags :

.