ಗಣೇಶ ವಿಸರ್ಜನೆ ವೇಳೆ ಯುವಕರಿಗೆ ಚಾಕು ಇರಿತ
11:33 AM Sep 21, 2024 IST
|
prashanth
ಮಂಡ್ಯ,ಸೆಪ್ಟಂಬರ್,21,2024 (www.justkannada.in): ಗಣೇಶ ವಿಸರ್ಜನೆ ವೇಳೆ ಯುವಕನ ಮೇಲೆ ಹಲ್ಲೆ ಮಾಡಿ ಚಾಕು ಇರಿದಿರುವ ಘಟನೆ ಮಂಡ್ಯ ತಾಲೂಕಿನ ಮಾಚಹಳ್ಳಿಯಲ್ಲಿ ನಡೆದಿದೆ.
ಸಚಿನ್, ನಂಜುಂಡಸ್ವಾಮಿಗೆ ಹಲ್ಲೆ ನಡೆಸಿ ಹೊಟ್ಟೆಗೆ ಚಾಕು ಇರಿಯಲಾಗಿದೆ. ದರ್ಶನ್, ಲೋಕೇಶ ಹಾಗೂ ಸ್ನೇಹಿತರ ಗ್ಯಾಂಗ್ ಗಲಾಟೆ ಮಾಡಿ ಹಲ್ಲೆ ನಡೆಸಿ ಚಾಕು ಇರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹಳೇ ದ್ವೇಷ ಹಿನ್ನೆಲೆ ಮಾಚಹಳ್ಳಿಯಲ್ಲಿ ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿದ್ದ ಸಚಿನ್, ನಂಜುಂಡಸ್ವಾಮಿ ಮೇಲೆ ಹಲ್ಲೆ ನಡೆಸಿ ಹೊಟ್ಟೆಗೆ ಚಾಕು ಇರಿಯಲಾಗಿದೆ. ದರ್ಶನ್ ಮತ್ತು ಸಚಿನ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಸದ್ಯ ಗಾಯಗೊಂಡ ಸಚಿನ್ ಕೈ ಹೊಟ್ಟೆ ಭಾಗಕ್ಕೆ ಗಾಯಗಳಾಗಿದ್ದು ಹಾಗೂ ನಂಜುಂಡಸ್ವಾಮಿಗೆ ಕಣ್ಣಿಗೆ ಗಾಯವಾಗಿದೆ. ಸದ್ಯ ಇಬ್ಬರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Key words: mandya, stabbed, boys, injury
Next Article