ಸುತ್ತೂರಿನಲ್ಲಿ ಸಾಮೂಹಿಕ ವಿವಾಹ ಮಹೋತ್ಸವ: 120 ಜೋಡಿಗಳು ಭಾಗಿ.
12:08 PM Feb 07, 2024 IST | prashanth
ಮೈಸೂರು,ಫೆಬ್ರವರಿ,7,2024(www.justkannada.in): ಸುತ್ತೂರು ಜಾತ್ರಾ ಮಹೋತ್ಸವ 2ನೇ ದಿನವಾದ ಇಂದು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ನೆರವೇರಿತು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಜರುಗಿದ್ದು, 120 ಜೋಡಿಗಳು ಭಾಗಿಯಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು.
ವೀರಶೈವ ಲಿಂಗಾಯತ 04, ಪರಿಶಿಷ್ಟ ಜಾತಿ 61, ಪರಿಶಿಷ್ಟ ಪಂಗಡ 26, ಹಿಂದುಳಿದ ವರ್ಗ 18, ಅಂತರ್ಜಾತಿ 11, ತಮಿಳುನಾಡಿನ 23 ಜೋಡಿ, ವಿಶೇಷ ಚೇತನ 04, ಮರು ಮದುವೆಯ 01 ಜೋಡಿ ಭಾಗಿಯಾಗಿದ್ದು ಹಸಮಣೆ ಏರಿದರು. ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನ ಸುತ್ತೂರು ಶ್ರೀಗಳು ಉದ್ಘಾಟನೆ ಮಾಡಿದರು.
ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗಿಯಾದ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಧೀಶರು ಭಾಗಿಯಾಗಿದ್ದರು.
Key words: Mass -wedding-celebration – Sattur- 120 couples-participated.