For the best experience, open
https://m.justkannada.in
on your mobile browser.

ರೈತರ ಬೃಹತ್ ಪ್ರತಿಭಟನೆ: ದೆಹಲಿಯಾದ್ಯಂತ ಒಂದು ತಿಂಗಳು 144 ಸೆಕ್ಷನ್ ಜಾರಿ.

11:11 AM Feb 13, 2024 IST | prashanth
ರೈತರ ಬೃಹತ್ ಪ್ರತಿಭಟನೆ  ದೆಹಲಿಯಾದ್ಯಂತ ಒಂದು ತಿಂಗಳು 144 ಸೆಕ್ಷನ್ ಜಾರಿ

ನವದೆಹಲಿ,ಫೆಬ್ರವರಿ,13,2024(www.justkannada.in)  ಕೃಷಿ ಉತ್ನನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ  ರೈತರು  ‘ದೆಹಲಿ ಚಲೋ' ಪ್ರತಿಭಟನೆ ಮಾಡಲು ರಾಷ್ಟ್ರ ರಾಜಧಾನಿಯತ್ತ ಆಗಮಿಸುತ್ತಿದ್ದಾರೆ.

ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಕಾನೂನು ಜಾರಿ ಸೇರಿ ಹಲವು ಬೇಡಿಕೆಗಳ ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ದೆಹಲಿ ಚಲೋಗೆ ಕರೆ ನೀಡಿವೆ. ಇದಕ್ಕೆ ದೇಶದ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಲಕ್ಷಾಂತರ ರೈತರು ದೆಹಲಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಒಂದು ತಿಂಗಳ ಕಾಲ 144 ಸೆಕ್ಷನ್ ಜಾರಿ ಮಾಡಲಾಗಿದೆ.  ರೈತರ ಪ್ರತಿಭಟನೆ ಹಿನ್ನೆಲೆ ಸಿಂಘು, ಘಾಜಿಪುರ್, ಟಿಕ್ರಿ ಗಡಿಯಲ್ಲಿ ಸಂಚಾರ ನಿರ್ಬಂಧಿಸಿರುವ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಬೃಹತ್ ಗಾತ್ರದ ಬ್ಯಾರಿಕೇಡ್, ಕಾಂಕ್ರಿಟ್ ಗೋಡೆ ನಿರ್ಮಿಸಿದ್ದಾರೆ. ರಸ್ತೆಯಲ್ಲಿ ಕಬ್ಬಿಣದ ಚೂಪಾದ ರಾಡ್‌ಗಳನ್ನು ಹಾಕಿದ್ದಾರೆ. ಇಂಟರ್‌ನೆಟ್ ಸ್ಥಗಿತಗೊಳಿಸಿ ದೆಹಲಿ ಸುತ್ತಲೂ ಪೊಲೀಸರು ಸುತ್ತುವರೆದಿದ್ದಾರೆ. ಇನ್ನು ದೆಹಲಿಯಲ್ಲಿ ರೈತರ ಪ್ರತಿಭಟನಗೆ ಅಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿದೆ.

Key words: Massive protest – farmers-Section 144 -  month - Delhi.

Tags :

.