For the best experience, open
https://m.justkannada.in
on your mobile browser.

ಜಪಾನಿ ಉದ್ಯಮಿಗಳೇ ನೀವೇ ಕರ್ನಾಟಕದ ರಾಯಭಾರಿಗಳಾಗಿ, ಹೆಚ್ಚಿನ ಹೂಡಿಕೆ ತನ್ನಿ: ಸಚಿವ ಎಂ.ಬಿ ಪಾಟೀಲ್ ಕರೆ

06:13 PM Jul 11, 2024 IST | prashanth
ಜಪಾನಿ ಉದ್ಯಮಿಗಳೇ ನೀವೇ ಕರ್ನಾಟಕದ ರಾಯಭಾರಿಗಳಾಗಿ  ಹೆಚ್ಚಿನ ಹೂಡಿಕೆ ತನ್ನಿ  ಸಚಿವ ಎಂ ಬಿ ಪಾಟೀಲ್ ಕರೆ

ಬೆಂಗಳೂರು,ಜುಲೈ,11,2024 (www.justkannada.in):  ಜಪಾನ್ ನಿಂದ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ತರಲು ಪೂರಕವಾಗಿ ಈಗಾಗಲೇ ಹೂಡಿಕೆ‌ ಮಾಡಿರುವ ಜಪಾನ್ ದೇಶದ ಕಂಪನಿಗಳೇ ಕರ್ನಾಟಕದ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಕರೆ ನೀಡಿದರು.

ಇಲ್ಲಿನ ಜಪಾನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (ಜೆಸಿಸಿಐ) ಇಲ್ಲಿ ಏರ್ಪಡಿಸಿದ್ದ ರಾಜ್ಯದಲ್ಲಿ ನೆಲೆಯೂರಿರುವ ಜಪಾನ್ ಮೂಲದ ಉದ್ಯಮ ಸಂಸ್ಥೆಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ ಪಾಟೀಲ್  ಅವರು ಮಾತನಾಡಿದರು.

ಕರ್ನಾಟಕ ಹೇಗೆ ಹೂಡಿಕೆ ಸ್ನೇಹಿ? ಇಲ್ಲಿ ಲಭ್ಯ ಇರುವ ಮಾನವ ಸಂಪನ್ಮೂಲ, ಕಾನೂನು ಸುವ್ಯವಸ್ಥೆ, ಹವಾಮಾನ ಇತ್ಯಾದಿ ವಿಷಯಗಳ ಬಗ್ಗೆ ತಮ್ಮ ದೇಶದ ಇತರ ಕಂಪನಿಗಳಿಗೂ ತಿಳಿಸುವಂತೆ ಅವರು ಕರೆ ನೀಡಿದರು.

ತಮ್ಮ ನೇತೃತ್ವದ ನಿಯೋಗ ಇತ್ತೀಚೆಗಷ್ಟೆ ಜಪಾನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಸ್ಪರ ಲಾಭದ ಅವಕಾಶಗಳಿರುವ ಹಲವಾರು ಹೂಡಿಕೆ ಸಾಧ್ಯತೆಗಳನ್ನು ಗುರುತಿಸಲಾಯಿತು. ಅದೊಂದು ಫಲಪ್ರದವಾದ ಭೇಟಿಯಾಗಿತ್ತು. ಇದೇ ವೇಳೆ, ಜಪಾನ್ ನ ಹಲವಾರು ಅಂಶಗಳು, ಅದರಲ್ಲೂ ಅಲ್ಲಿನ ಸಾರಿಗೆ ವ್ಯವಸ್ಥೆ ವೈಯಕ್ತಿಕವಾಗಿ ತಮಗೆ ಅತ್ಯಂತ ಹೆಚ್ಚಿನ ಅಚ್ಚರಿ ಮೂಡಿಸಿತು ಎಂದು ವಿವರಿಸಿದರು.

ಬರುವ ಫೆಬ್ರುವರಿ 12-14ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಎಲ್ಲ ಉದ್ಯಮ ಪ್ರತಿನಿಧಿಗಳಲ್ಲಿ ಸಚಿವ ಎಂ.ಬಿ ಪಾಟೀಲ್  ಮನವಿ ಮಾಡಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ,  ಹೂಡಿಕೆ ಆಧಾರದ ಮೇಲೆ ರಿಯಾಯಿತಿಗಳನ್ನು ನೀಡುವ ವ್ಯವಸ್ಥೆ ರೂಪಿಸಲಾಗಿದ್ದು, ತಮ್ಮ ದೇಶದ ಇತರ‌ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡುವ ಹಾಗೆ ಮಾಡಬೇಕು ಎಂದರು.

ಬೆಂಗಳೂರಿನಲ್ಲಿನ ಜಪಾನ್ ಕಾನ್ಸುಲೇಟ್ ಜನರಲ್ ಟ್ಸುಟೊಮು ನಕಾನೆ, ಉಪ ಕಾನ್ಸುಲೇಟ್ ಜನರಲ್ ಹೊಕುಟೊ ಕಾಯ ಸೇರಿದಂತೆ ನೂರಕ್ಕೂ ಹೆಚ್ಚು ಜಪಾನಿ ಉದ್ಯಮಿಗಳು ಈ ಸಂದರ್ಭದಲ್ಲಿ ಇದ್ದರು.

ENGLISH SUMMARY...

MB Patil Urges Japanese Companies to Act as Investment Ambassadors

Bengaluru: MB Patil, Minister for Large and Medium Industries, on Wednesday, urged Japanese companies located in Karnataka to act as ambassadors to attract increased investments from Japan to the state.

Speaking at an interaction organised by the Japan Chamber of Commerce and Industry (JCCI) with representatives of Japanese companies based in Karnataka, he noted that the recent delegation he led to Japan identified potential investment opportunities that could benefit both regions.

He appealed to the company representatives to inform other businesses in their country about Karnataka's industry-friendly policies, availability of human resources, and favourable climatic conditions.

Expressing his admiration for many aspects of Japan, particularly its transport system, he highlighted that over 70 percent of Japanese companies in India have a presence in Karnataka. "The visit to Japan was very successful," he added.

The Minister also invited industry experts to actively participate in the upcoming Global Investors Meet, scheduled to be held from February 12-14, 2025.

S. Selvakumar, Principal Secretary, and Gunjan Krishna, Commissioner of the Department of Industries, emphasised that the state has been awarding incentives to industries based on the size of investment. They urged Japanese companies in Karnataka to encourage other companies from Japan to invest in the state.

Tsutomu Nakane, Consul General of Japan in Bengaluru, Hokoto Kaya, Deputy Consul General, and over a hundred industry leaders were present at the event.

Key words: MB Patil, Japanese, Companies, Investment, Ambassadors

Tags :

.