HomeBreaking NewsLatest NewsPoliticsSportsCrimeCinema

Medical negligence: ಹದಿನಾಲ್ಕು ವರ್ಷಗಳಿಂದ ಕೋಮಾದಲ್ಲಿದ್ದ ಗೃಹಿಣಿ ಮೃತ.

10:18 AM Dec 07, 2023 IST | prashanth

ಬೆಂಗಳೂರು, ಡಿ.07,2023: (www.justkannada.in): ಸುಮಾರು ಹದಿನಾಲ್ಕೂವರೇ ವರ್ಷಗಳಿಂದ ಪ್ರಜ್ಞಾಹೀನ ಅಂದರೆ ಕೋಮಾ ಸ್ಥಿತಿಯಲ್ಲಿದ್ದ ಬೆಂಗಳೂರಿನ ಗೃಹಿಣಿ ಶೈಲಜಾ ಮುನಿರಾಜು ಕೊನೆಗೂ ಸೋಲನ್ನು ಒಪ್ಪಿಕೊಂಡಿದ್ದಾರೆ. ಅವರು ಕಳೆದ ರಾತ್ರಿ ನಿಧನರಾಗಿದ್ದಾರೆ.

ಹದಿನಾಲ್ಕುವರೆ ವರ್ಷಗಳ ಹಿಂದೆ ವಿಪರೀತ ಬೆನ್ನು ನೋವಿನಿಂದ ನರಳುತ್ತಿದ್ದ ಶೈಲಜಾ ಅವರಿಗೆ ಕ್ರೆಸೆಂಟ್   ರಸ್ತೆಯಲ್ಲಿರುವ  ಮಲ್ಲಿಗೆ ಮೆಡಿಕಲ್ ಸೆಂಟರ್ ನಲ್ಲಿ ಶಸ್ತ್ರ ಚಿಕಿತ್ಸೆಗೆ ಅನೇಸ್ಥೆಶಿಯ ನೀಡುವಾಗ ಆಕ್ಸಿಜನ್ ಪೂರೈಕೆ ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದರಿಂದ ಮೆದಳು ನಿಷ್ಕ್ರಿಯವಾಗಿ ಅವರು ಕೋಮಾ ಸ್ಥಿತಿಗೆ ಜಾರಿದ್ದರು.

ಅಲ್ಲಿಂದ ಇದುವರೆಗೂ ಜೀವಚ್ಛವವಾಗಿ ಆಕಾಶದತ್ತ ಕಣ್ಣು ಹೊರಳಿಸಿ ಮಲಗಿದ್ದರು.ಆಸ್ಪತ್ರೆ ಮತ್ತು ವೈದ್ಯರ ನಿರ್ಲಕ್ಷದ ವಿರುದ್ಧ ಹದಿನಾಲ್ಕು ವರ್ಷಗಳಿಂದ ಶೈಲಜಾ ಅವರ ಪತಿ ಎಲೆಕ್ಟ್ರಿಕ್ ಕಂಟ್ರಾಕ್ಟರ್ ಮುನಿರಾಜು ಛಲ ಬಿಡದೆ ಹೋರಾಡುತ್ತಿದ್ದರು.

ಪೊಲೀಸ್ ಇಲಾಖೆ,  ಕರ್ನಾಟಕ ಮೆಡಿಕಲ್ ಕೌನ್ಸಿಲ್ ಹೀಗೆ ಎಲ್ಲಾ ಕಡೆ  ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. ಆದರೂ ನ್ಯಾಯ ಸಿಕ್ಕಿರಲಿಲ್ಲ. ದೆಹಲಿಯ ನ್ಯಾಷನಲ್ ಕನ್ಸೂಮರ್  ಫೋರಂ ನಲ್ಲಿ ಈಗಲೂ ಅವರ ಕೇಸು ನಡೆಯುತ್ತಿದೆ. ತಮ್ಮ ಪತ್ನಿ ಜೀವಂತ ಇರುವಾಗಲೇ ನ್ಯಾಯ ಪಡೆಯಬೇಕೆಂಬ ಅವರ ಹೋರಾಟಕ್ಕೆ ಹಿನ್ನಡೆಯಾಗಿದೆ.

ಸಂಕಷ್ಠ ಸ್ಥಿತಿಯಲ್ಲಿರುವ ಈ ಕುಟುಂಬಕ್ಕೆ ದಯವಿಟ್ಟು ಸಹಾಯ ಮಾಡಬೇಕೆಂದು ಮತ್ತು ಈ ಸಂದೇಶವನ್ನು ಶೇರ್  ಮಾಡಬೇಕೆಂದು ಮನವಿ.

ಅವರ ಫೋನ್ ಪೇ ಮತ್ತು ಗೂಗಲ್ ಪೇ ನಂಬರ್, -9845885886

 

ಕೃಪೆ: ಸಿ.ರುದ್ರಪ್ಪ.

Key words: Medical negligence-  housewife - coma - fourteen years -died.

Tags :
comafourteen years -died.housewifeMedical negligence
Next Article