HomeBreaking NewsLatest NewsPoliticsSportsCrimeCinema

ಮಿಚಾಂಗ್  ಅಬ್ಬರ: ಭಾರಿ ಮಳೆಗೆ ತಮಿಳುನಾಡು ತತ್ತರ: ಆಂಧ್ರಪ್ರದೇಶದಲ್ಲಿ ಅಲರ್ಟ್ ಘೋಷಣೆ

10:58 AM Dec 05, 2023 IST | prashanth

ತಮಿಳು ನಾಡು/ಆಂಧ್ರ ಪ್ರದೇಶ,ಡಿಸೆಂಬರ್,5,2023(www.justkannada.in):  ದಕ್ಷಿಣ ಭಾರತದಲ್ಲಿ ತೀವ್ರ ಪ್ರವಾಹ ಸೃಷ್ಟಿಸಿರುವ ಮಿಚಾಂಗ್ ಚಂಡಮಾರುತದ ಅಬ್ಬರದಿಂದ  ತಮಿಳುನಾಡು ತತ್ತರಿಸಿದ್ದು, ಭಾರಿ ಮಳೆಗೆ ಚೆನ್ನೈರಸ್ತೆಗಳು ವಸತಿ ಪ್ರದೇಶಗಳು ಜಲಾವೃತಗೊಂಡಿವೆ.

ಮಿಚಾಂಗ್ ಚಂಡಮಾರುತ ತಮಿಳುನಾಡಿನಲ್ಲಿ ಭಾರಿ ಅನಾಹುತವನ್ನು ಸೃಷ್ಟಿಸುತ್ತಿದ್ದು  ರಸ್ತೆಗಳ ಮೇಲೆ ಪ್ರವಾಹದಂತೆ ಮಳೆ ನೀರು  ಹರಿಯುತ್ತಿದೆ. ರಾತ್ರಿ ಇಡಿ ಸುರಿದ ಮಳೆಗೆ  ರಸ್ತೆಗಳು ಕೆರೆಯಂತಾಗಿವೆ. ನಗರದ ಅಂಡರ್ ಪಾಸ್ ಮುಳುಗಡೆ ಯಾಗಿದ್ದು, ಕರಾವಳಿಯ ಮಹಾನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಕಾರು, ಬೈಕ್​ಗಳು ನಾಶವಾಗಿವೆ. ಅಣ್ಣಾ ಸಲೈ ಸೇರಿದಂತೆ ಹಲವಾರು ರಸ್ತೆಗಳು ಜಲಮಾರ್ಗಗಳಾಗಿ ಮಾರ್ಪಟ್ಟಿವೆ. ಹೆಚ್ಚಿನ ಸಂಖ್ಯೆಯ ನಿಲುಗಡೆ ಮಾಡಿದ ಕಾರುಗಳು ಪಲ್ಲಿಕರಣೈನ ಗೇಟ್ ಕಾಲೋನಿಯಿಂದ ಕೊಚ್ಚಿಹೋಗಿವೆ.

ಆಂಧ್ರ ಪ್ರದೇಶದಲ್ಲೂ ಮಿಚಾಂಗ್ ಚಂಡಮಾರುತ ಅಬ್ಬರ ಜೋರಾಗಿದ್ದು, ಆಂದ್ರಪ್ರದೇಶದ ಎಂಟು ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ.  ನೆಲ್ಲೂರು ತಿರುಪತಿ ಪ್ರಕಾಶಂ ಕೋನಾಸೀಮಾ ಕಾಕಿನಾಡ, ಬಾಪಾಟ್ಲಾ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ.

Key words: Michong - Tamil Nadu - heavy rains- Alert -declared -Andhra Pradesh

Tags :
Andhra PradeshdeclaredMichong - Tamil Nadu - heavy rains- Alert
Next Article