For the best experience, open
https://m.justkannada.in
on your mobile browser.

ಸಚಿವ ಕೆ. ವೆಂಕಟೇಶ್ ಕಿರುಕುಳ ನೀಡಿದ ಆರೋಪ : ಮೈಮುಲ್ ಅಧ್ಯಕ್ಷ ಸ್ಥಾನ ಪ್ರಸನ್ನ ರಾಜೀನಾಮೆ

05:57 PM Jul 06, 2024 IST | prashanth
ಸಚಿವ ಕೆ  ವೆಂಕಟೇಶ್ ಕಿರುಕುಳ ನೀಡಿದ ಆರೋಪ   ಮೈಮುಲ್ ಅಧ್ಯಕ್ಷ ಸ್ಥಾನ ಪ್ರಸನ್ನ ರಾಜೀನಾಮೆ

ಮೈಸೂರು,ಜುಲೈ,6,2024(www.justkannada.in):  ಮೈಸೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಪಿ.ಎಂ. ಪ್ರಸನ್ನ ರಾಜೀನಾಮೆ ಸಲ್ಲಿಸಿದ್ದು ಈ ಕುರಿತು ಸ್ಪಷ್ಟನೆ ನೀಡಿರುವ ಅವರು,  ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ಕಿರುಕುಳ ದಿಂದ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಪಿ.ಎಂ.  ಪ್ರಸನ್ನ,  ಸಚಿವರು ರಾಜಕೀಯ ಕಾರಣಕ್ಕೆ ನನಗೆ ಬಹಳ ಕಿರುಕುಳ ಕೊಡುತ್ತಿದ್ದಾರೆ. ವಾಸ ದೃಢೀಕರಣ ಪತ್ರದ ವಿಚಾರದಲ್ಲಿ ಪದೇ ಪದೇ ನೋಟೀಸ್ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ. ನಾನು ರಾಜೀನಾಮೆ ಕೊಡದೆ ಇದ್ದರೆ ಎಲ್ಲಾ ಪದಾಧಿಕಾರಿಗಳ ವಜಾಕ್ಕೆ ವಾಮಾಮಾರ್ಗದ ಮೂಲಕ ಯತ್ನಿಸುತ್ತಾರೆ. ಈ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ರಾಜೀನಾಮೆ ಕೊಟ್ಟ ಬಳಿಕವೂ  28.c ತನಿಖೆಗೆ ನೋಟಿಸ್ ಕೊಟ್ಟಿದ್ದಾರೆ.ಪಿರಿಯಾಪಟ್ಟಣದಲ್ಲಿ ಸಿಎಂ ಆಪ್ತ ಸಚಿವ ಕೆ.ವೆಂಕಟೇಶ್ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಅವರಿಗೆ ಪ್ರತಿಸ್ಪರ್ಧಿಯಾಗುತ್ತೇನೆ ಎಂದು ಈ ರೀತಿ ಮಾಡುತ್ತಿದ್ದಾರೆ. ನಾನು ಇರುವವರೆಗೂ ಅವರ ವಿರುದ್ಧವೇ ಹೋರಾಟ ಮಾಡುತ್ತೇನೆ. ನಾನು ರಾಜಕೀಯವಾಗಿ ಅವರ ಮಗನಿಗೆ ಎದುರಾಳಿಯಾಗುತ್ತೇನೆ ಎಂದು ಈ ರೀತಿ ನನ್ನ ಮತ್ತು ನನ್ನ ಕುಟುಂಬದ ಜೊತೆ ದ್ವೇಷ ಮಾಡುತ್ತಿದ್ದಾರೆ. ನಾನು ಇದಕ್ಕೆ ಹೆದರಲ್ಲ ನನ್ನ ನಂಬಿ ನನ್ನನ್ನ ಈ ಸ್ಥಾನಕ್ಕೆ ಕೂರಿಸಿರುವ ಒಕ್ಕೂಟದ ಸದಸ್ಯರಿಗೆ ಯಾವುದೇ ತೊಂದರೆ ಆಗಬಾರದು ಅಂತ ನಾನು ರಾಜಿನಾಮೆ ಸಲ್ಲಿಸಿದ್ದೇನೆ. ಸಹಕಾರಿ ಕ್ಷೇತ್ರದಲ್ಲಿ  ನನಗೆ ಜಿಟಿ ದೇವೇಗೌಡರೇ ನಮಗೆ ಗುರುಗಳು. ಅವರ ಗಮನಕ್ಕೆ ತಂದು ರಾಜಿನಾಮೆ ಕೊಟ್ಟಿದ್ದೇನೆ. ಅವರು ಬೇಡ ಇರು ಅಂತ ಹೇಳಿದ್ರು ಆದ್ರೂ ನಾನು ರಾಜಿನಾಮೆ ಕೊಟ್ಟಿದ್ದೇನೆ ಎಂದು  ಮೈಮುಲ್ ಅಧ್ಯಕ್ಷ ಪ್ರಸನ್ನ ಕುಮಾರ್ ಹೇಳಿದ್ದಾರೆ.

ನಾನು ಮೈಮೂಲ್ ಅಧ್ಯಕ್ಷನಾಗಿ ಮೂರುಕಾಲು ವರ್ಷ ಆಯ್ತು. ನನ್ನ ಆಡಳಿತಾವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದೇನೆ. ಹಾಲು ಒಕ್ಕೂಟಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ರೈತರ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ನಗರಕ್ಕೆ ಬಂದಾಗ ಅವರಿಗೆ ಇಂದು ಸುಸಜ್ಜಿತವಾದ ವಿದ್ಯಾರ್ಥಿ ನಿಲಯ ತರೆಯಬೇಕೆಂದು ವಿದ್ಯಾರ್ಥಿ ನಿಲಯ ಸ್ಥಾಪನೆ  ಮಾಡಿದ್ದೇವೆ. 128 ಕೋಟಿ ವೆಚ್ಚದಲ್ಲಿ ಟೆಟ್ರಾ ಪ್ಯಾಕ್ ಉತ್ಪಾದನಾ ಘಟಕ ಸ್ಥಾಪನೆ ಮಾಡಿದ್ದೇವೆ. ಇದರ ಜೊತೆಗೆ ಹಲವಾರು ಕೆಲಸಗಳನ್ನ ನನ್ನ ಅವಧಿಯಲ್ಲಿ ಮಾಡಿರುವ ತೃಪ್ತಿ ನನಗಿದೆ ಈಗ ರಾಜಿನಾಮೆ ಸಲ್ಲಿಸಿದ್ದೇನೆ. ನನ್ನ ಸಚಿವ ವೆಂಕಟೇಶ್ ಅವರು ಹೇಗಾದರೂ ಮಾಡಿ ವಜಾ ಮಾಡಿಸಬೇಕು ಎಂಬ ಪ್ರಯತ್ನ ಮಾಡುತ್ತಿದ್ದಾರೆ. ಮಾಡಲಿ ನಾನು ನನ್ನ ತಾಲ್ಲೂಕಿನ ಜನರ ಮುಂದೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ ಎಂದು ಮೈಮುಲ್ ಅಧ್ಯಕ್ಷ ಪ್ರಸನ್ನ ಹೇಳಿದರು.

Key words: Minister, K. Venkatesh, harassment, Mymul president, resigns

Tags :

.