ಸಿಎಂ ಕುರ್ಚಿ ಅಲ್ಲಾಡುತ್ತಿದೆ ಎಂದ ಬಿವೈ ವಿಜಯೇಂದ್ರಗೆ ಸಚಿವ ಎಂ.ಬಿ ಪಾಟೀಲ್ ತಿರುಗೇಟು
10:23 AM Sep 19, 2024 IST
|
prashanth
ವಿಜಯಪುರ,ಸೆಪ್ಟಂಬರ್,19,2024 (www.justkannada.in): ಎಐಸಿಸಿ ಅಧ್ಯಕ್ಷರನ್ನ ಮೆಚ್ಚಿಸಲು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಸಿಎಂ ಕುರ್ಚಿ ಅಲುಗಾಡುತ್ತಿದೆ ಎಂದು ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಗಟ್ಟಿ ಇದ್ದಾರೆ. ಸಿಎಂ ಕುರ್ಚಿ ಸಹ ಗಟ್ಟಿಯಿದೆ. ಆದರೆ ಅಲಗಾಡುತ್ತಿರುವುದು ಬಿವೈ ವಿಜಯೇಂದ್ರ ಅವರ ಕುರ್ಚಿ ಎಂದು ಟಾಗ್ ಕೊಟ್ಟಿದ್ದಾರೆ.
Key words: Minister, MB Patil, BY Vijayendra, CM, chair, shaking
Next Article