HomeBreaking NewsLatest NewsPoliticsSportsCrimeCinema

ಕತ್ತಲಲ್ಲಿ ನಡೆದ ಸಚಿವದ್ವಯರ ಸಭೆ : ಡಿಸಿಎಫ್‌ ವಿರುದ್ಧ ಶಾಸಕರ ಆಕ್ರೋಶ; ಡಿಡಿ ಅಮಾನತ್ತಿಗೆ ಸೂಚಿಸಿದ ಸಚಿವ.!

03:37 PM Jun 10, 2024 IST | mahesh

 

The minister in charge took a dig at the officials at the KDP meeting. Minister K Venkatesh expressed grief over the death of cattle in the district. K.Venkatesh, instructed the DC to recommend suspension of Animal Husbandry Department DD Hanumegowda.

 

ಚಾಮರಾಜನಗರ, ಜೂ.10,2024: (www.justkannada.in news)  ಬಿಳಿಗಿರಿರಂಗನ ಬೆಟ್ಟದ ಗಿರಿಜನರಿಗೆ ನೀರು ಕೊಡುವ ವಿಚಾರದಲ್ಲಿ ಅಧಿಕಾರಿಗಳ ನಡುವೆ ವಾಗ್ವಾದ. ಇದಕ್ಕೆ ದನಿಗೂಡಿಸಿದ ಶಾಸಕರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವ ಮಹದೇವಪ್ಪ ನೇತೃತ್ವದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಘಟನೆ.

ಡಿಎಫ್ ಓ ಹಾಗೂ ಅಧಿಕಾರಿಗಳ ವಿರುದ್ಧ ಕೇಳಿ ಬಂದ ಆರೋಪ,ಪ್ರತ್ಯಾರೋಪ. ನೀರು ಕೊಡಲು ಡಿಎಫ್ಒ ಬಿಡುತ್ತಿಲ್ಲ ಎಂದು ಆರೋಪ.  ಕುಡಿಯುವ ನೀರಿಗೂ ಡಿಎಫ್ಓ ತೊಂದರೆ ಕೊಡುತ್ತಿದ್ದಾರೆ ಎಂದು ಶಾಸಕರು ಕೂಡ ಆರೋಪ.

ಡಿಎಫ್ ಓ ವಿರುದ್ದ ಆಕ್ರೋಶ ಹೊರ ಹಾಕಿದ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ. ಹಿಂದಿನಿಂದಲೂ  ಕುಡಿಯುವ ನೀರು ಸರಬರಾಜು ಆಗುತ್ತಿದೆ.  ಆದರೆ ಪೈಪ್ ಸರಿಪಡಿಸುವ ಕೆಲಸಕ್ಕೂ ಬಿಡದೇ ತೊಂದರೆ ಕೊಡುತ್ತಿದ್ದಾರೆ, ನಮ್ಮ ಮಾತು ಸಹ ಕೇಳುತ್ತಿಲ್ಲ ಎಂದು ಡಿಸಿಎಫ್  ವಿರುದ್ಧ ಸಚಿವರ ಎದುರೇ ಆಕ್ರೋಶ ಹೊರ ಹಾಕಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಎ.ಆರ್.ಕೃಷ್ಣಮೂರ್ತಿ.

ಸಚಿವರಿಂದ ತರಾಟೆ:

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ  ಉಸ್ತುವಾರಿ ಸಚಿವ. ಜಿಲ್ಲೆಯಲ್ಲಿ ಜಾನುವಾರುಗಳ ಸಾವು ಹಿನ್ನಲೆ, ಗರಂ ಆದ ಸಚಿವ ಕೆ.ವೆಂಕಟೇಶ್.

ಪಶುಸಂಗೋಪನೆ ಇಲಾಖೆ ಡಿಡಿ ಹನುಮೇಗೌಡ ಅಮಾನತಿಗೆ ಶಿಫಾರಸು ಮಾಡುವಂತೆ ಡಿಸಿಗೆ ಸೂಚನೆ.

ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಜನ ಜಾನುವಾರುಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಗುಡುಗಿದ ಸಚಿವ ವೆಂಕಟೇಶ್

ಕತ್ತಲೆಯಲ್ಲೇ ಸಭೆ :

ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ. ಈ ಸಭೆಯಲ್ಲಿ ಶಾಸಕ ಪುಟ್ಟರಂಗ ಶೆಟ್ಟಿ, ಎ ಆರ್ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್.ಪಿ ಪದ್ಮಿನಿ ಸಾಹೋ ಭಾಗಿ.

ಸಭೆಯ ವೇಳೆ ಕೈ ಕೊಟ್ಟ ಕರೆಂಟ್ . ಜಿಲ್ಲಾಡಳಿತಕ್ಕೆ ಭಾರೀ ಮುಖಭಂಗ, ಅರ್ಧ ಗಂಟೆ ಕಳೆದರೂ ಬಾರದ ವಿದ್ಯುತ್. ಕತ್ತಲಲ್ಲೇ ಸಭೆ ನಡೆಸಿದ ಸಚಿವರು ಹಾಗೂ ಅಧಿಕಾರಿಗಳು.

key words: Ministers' meeting held, in the dark, MLAs protest against DCF, Minister orders suspension of DD

SUMMARY:

An argument broke out between the officials over the issue of providing water to the tribals of Biligirirangana hills. The legislators raised their voice.

Allegations and counter-allegations against the DFO and officials. It is alleged that the DFO is not allowing water to be given.  The MLAs also alleged that the DFO was also harassing to provide drinking water.

The minister in charge took a dig at the officials at the KDP meeting. Minister K Venkatesh expressed grief over the death of cattle in the district. K.Venkatesh, instructed the DC to recommend suspension of Animal Husbandry Department DD Hanumegowda.

Power supply interrupted during the meeting. The district administration suffered a major setback, electricity problem was not rectified even after half an hour. Ministers and officials held the meeting in the dark.

Tags :
chamaraja Nagarain the darkMinister orders suspension of DDMinisters' meeting heldMLAs protest against DCFShilpa Nag
Next Article