For the best experience, open
https://m.justkannada.in
on your mobile browser.

‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’: ಘೋಷವಾಕ್ಯ ಬದಲಾವಣೆಗೆ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ.

11:24 AM Feb 19, 2024 IST | prashanth
‘ಜ್ಞಾನ ದೇಗುಲವಿದು  ಧೈರ್ಯವಾಗಿ ಪ್ರಶ್ನಿಸಿ’  ಘೋಷವಾಕ್ಯ ಬದಲಾವಣೆಗೆ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ

ಬೆಂಗಳೂರು,ಫೆಬ್ರವರಿ,19,2024(www.justkannada.in):  ವಸತಿ ಶಾಲೆಗಳಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎಂಬ ಘೋಷವಾಕ್ಯವನ್ನ ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾಯಿಸಿರುವ ಬಗ್ಗೆ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ,  ಸಮಾಜದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಗಳು ಆಗಬೇಕು.  ಪ್ರಶ್ನಿಸಿ ಅಂದ್ರೆ ಇದರಲ್ಲಿ ತಪ್ಪೇನಿದೆ...? ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಧೈರ್ಯವಾಗಿ ಪ್ರಶ್ನಿಸುವುದನ್ನ ಮಕ್ಕಳು ಕಲಿತುಕೊಳ್ಳಬೇಕು.  ಇದು ಕಲಿಕೆಗೆ ಅಗತ್ಯ ಎಂದು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಹಾಗೂ ಇತರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ದ್ವಾರದಲ್ಲಿ ಬರಹ ಬದಲಾಯಿಸಲಾಗಿದೆ. ಇದೀಗ ಈ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Key words: Minister -Priyank Kharge- justification - slogan change.

Tags :

.