ಕೆಎಸ್ ಆರ್ ಟಿಸಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ರಾಮಲಿಂಗರೆಡ್ಡಿ
ಬೆಂಗಳೂರು,ಜುಲೈ,15,2024 (www.justkannada.in): ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಶೀಘ್ರವೇ ಬಸ್ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಅಲ್ಲದೆ ಬಸ್ ದರ ಏರಿಕೆಗೆ ಚಿಂತನೆ ಮಾಡಲಾಗಿದೆ ಎಂದು ರಾಜುಕಾಗೆ ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಬಸ್ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ. ರಾಜುಕಾಗೆ ಹೇಳಿರೋದು ಅವರ ವೈಯಕ್ತಿಕ ಅಭಿಪ್ರಾಯ. ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದ್ದಾರೆ.
ಇನ್ನು ಮುಡಾ ಹಗರಣ ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಹಗರಣ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗರೆಡ್ಡಿ, ಮುಡಾ ಹಗರಣ ಅಂತಾರೆ . ಅದು ಯಾರ ಕಾಲದಲ್ಲಿ ಆಗಿದ್ದು. ಆಗ ಬಿಎಸ್ ವೈ ಸಿಎಂ ಆಗಿದ್ರು. ಬಿಜೆಪಿಯವರೇ ಮಂತ್ರಿಯಾಗಿದ್ದರು. ಮುಡಾ ಅಧ್ಯಕ್ಷರಾಗಿದ್ದು ಬಿಜೆಪಿಯವರು. ಹಗರಣಕ್ಕೆ ಅವರೇ ಕಾರಣ . ವಾಲ್ಮೀಕಿ ನಿಗಮ ಮುಡಾ ಎರಡೂ ಹಗರಣಗಳನ್ನ ತನಿಖೆಗೆ ಕೊಟ್ಟಿದ್ದೇವೆ. ಬಿಜೆಪಿ ಕಾಲದಲ್ಲೇ ನೂರಾರು ಹಗರಣ ಆಗಿದೆ. ಆದರೆ ಅವರು ತನಿಖೆಗೆ ಕೊಟ್ಟಿಲ್ಲ ಎಂದು ಟಾಂಗ್ ಕೊಟ್ಟರು.
Key words: Minister, Ramalingareddy, KSRTC, bus ticket rate