ಚುನಾವಣೆಯಲ್ಲಿ ಲೀಡ್ ಕೊಡದಿದ್ದರೇ ಕುರ್ಚಿ ಬಿಡಬೇಕಾಗುತ್ತದೆ-ಸಚಿವ ಶರಣಬಸಪ್ಪ ದರ್ಶನಾಪುರ
ಯಾದಗಿರಿ, ಏಪ್ರಿಲ್ 16,2024 (www.justkannada.in): ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದಿದ್ದರೆ ಕುರ್ಚಿ ಬಿಡಬೇಕಾಗುತ್ತದೆ ಎಂದು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.
ಈ ಮೂಲಕ ಲೀಡ್ ಕೊಡಿಸದಿದ್ದರೇ ಸಚಿವ ಸ್ಥಾನ ಬಿಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಪ್ರಚಾರ ಭಾಷಣದಲ್ಲಿ ಮಾತನಾಡಿರುವ ಶರಣಬಸಪ್ಪ ದರ್ಶನಾಪುರ ಅವರು, 'ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದೇ ಹೋದರೆ ಆ ಕುರ್ಚಿಯನ್ನು (ಮಂತ್ರಿ) ಅಲ್ಲಿಗೇ ಬಿಡಬೇಕಾಗುತ್ತದೆ. ನಾವೇ ಲೀಡ್ ಕೊಡದಿದ್ರೆ ನಾವೇನು ಮುಖ ತೋರಿಸಬೇಕು ಎಂದು ಹೇಳಿದ್ದಾರೆ.
ನಿಜ ಹೇಳಬೇಕೆಂದರೆ ನನಗೆ ಮಂತ್ರಿ ಹುದ್ದೆಯನ್ನೇ ಕೊಡಬಾರದಾಗಿತ್ತು. ಯಾಕೆಂದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 20 ಸಾವಿರ ಲೀಡ್ ಆಗಿತ್ತು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ಸಿಗದಿದ್ದರೆ ತಪ್ಪು ಸಂದೇಶ ಹೋಗುತ್ತದೆ. ನಿಮ್ಮ (ವಿಧಾನಸಭೆ) ಚುನಾವಣೆಯನ್ನು ಶ್ರಮ ಹಾಕಿ ಗೆಲ್ಲುತ್ತೀರಿ. (ಲೋಕಸಭೆ) ಚುನಾವಣೆಯಲ್ಲಿ ಪಕ್ಷಕ್ಕೆ ಲೀಡ್ ತಂದುಕೊಡುವುದಿಲ್ಲ ಎಂಬ ಭಾವನೆ ಬರುತ್ತದೆ ಎಂದು ಅವರು ಹೇಳಿದ್ದಾರೆ.
Key words: Minister, Sharanbasappa Darshanapura, election