HomeBreaking NewsLatest NewsPoliticsSportsCrimeCinema

ಕೇಂದ್ರದಿಂದ ಐಟಿ, ಇಡಿ ದುರ್ಬಳಕೆ: ಶೇ 95 ರಷ್ಟು ವಿಪಕ್ಷಗಳ ಮೇಲೆ ಕೇಸ್ - ಸಚಿವ ಕೃಷ್ಣಭೈರೇಗೌಡ

11:16 AM Jul 18, 2024 IST | prashanth

ಬೆಂಗಳೂರು,ಜುಲೈ,18,2024 (www.justkannada.in): ಕೇಂದ್ರ ಸರ್ಕಾರ ಐಟಿ, ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಶೇ 95 ರಷ್ಟು ವಿಪಕ್ಷಗಳ ಮೇಲೆ ಕೇಸ್ ಹಾಕಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಆರೋಪಿಸಿದರು.

ವಿಧಾನಸೌಧದಲ್ಲಿ ನಾಲ್ವರು ಸಚಿವರ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ವಾಲ್ಮೀಕಿ ಹಗರಣದಲ್ಲಿ ಷಡ್ಯಂತ್ರ ನಡೆಸಲಾಗುತ್ತಿದೆ. ಇಡಿ ಸಿಬಿಐ ರಾಜಕೀಯ ಅಸ್ತ್ರವಾಗಿದೆ ವಿಪಕ್ಷಗಳು ಮೇಲೆ ದಾಳಿ ಮಾಡುವುದು ಹಸೊದೇನಲ್ಲ. ಬಿಜೆಪಿ ಬಂದ ಮೇಲೆ ಶೇ 95 ರಷ್ಟು ಕೇಸ್ ವಿರೋಧ ಪಕ್ಷಗಳ ಮೇಲೆ ಕೇಸ್ ಗಳು ಹಾಕಲಾಗಿದೆ ಬಿಜೆಪಿ ಸೇರಿದ ತಕ್ಷಣ ಎಲ್ಲಾ ಕೇಸ್ ಗಳೂ ಖಲಾಸೆಯಾಗುತ್ತವೆ ಎಂದು ಕಿಡಿಕಾರಿದರು.

ಇಡಿ ಐಟಿಯನ್ನ ಸರ್ಜಿಕಲ್ ಸ್ಟ್ರೈಕ್ ತರ ಬಳಸಿಕೊಳ್ಳುತ್ತಿದ್ದಾರೆ.  ರಾಜಿ ಆಗುವವರಿಗೆ ಇಡಿ ರಕ್ಷಣೆ ನೀಡುತ್ತಿದೆ. ತನಿಖೆ ಕೇವಲ ನೆಪ ಮಾತ್ರ. ಕಳೆದ ವಿಧಾನಸಭೆ ಚುನಾವಣೆಯ ಸೋಲಿನಿಂದ ಹತಾಶರಾಗಿರುವ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.

Key words: Misuse, IT, ED, Center, Minister, Krishnabhairegowda

Tags :
CenterEDITKrishnabhairegowdaministerMisuse
Next Article