HomeBreaking NewsLatest NewsPoliticsSportsCrimeCinema

ಕೇಂದ್ರ ಸರ್ಕಾರದಿಂದ ರಾಜಭವನ ದುರ್ಬಳಕೆ- ಸಚಿವ ಚಲುವರಾಯಸ್ವಾಮಿ ಆರೋಪ

01:56 PM Aug 21, 2024 IST | prashanth

ಚಿಕ್ಕಬಳ್ಳಾಪುರ,ಆಗಸ್ಟ್,21,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ,  ಕೇಂದ್ರದ ಬಿಜೆಪಿ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ರಾಜಕಾರಣಕ್ಕೆ ಇಡಿ, ಐಟಿ, ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಬಿಜೆಪಿ ಈಗ ರಾಜಭವನವನ್ನು ಕೂಡ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜಕಾರಣಕ್ಕಾಗಿ ರಾಜಭವನ ಬಳಸಿಕೊಳ್ಳುತ್ತಿವೆ. ಏನೂ ನಡೆಯದಿದ್ದರೂ  ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ. ಆದರೆ  ಕುಮಾರಸ್ವಾಮಿ ವಿರುದ್ದ ಸಾಕ್ಷಿಗಳಿದ್ದರೂ ಪ್ರಾಸಿಕ್ಯೂಷನ್ ಗೆ ಅನುಮತಿ ಆದೇಶ ನೀಡದೇ ರಾಜಕಾರಣ ಮಾಡಿದ್ದಾರೆ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಗಣಿ ಅಕ್ರಮದ ಬಗ್ಗೆ ಪ್ರಾಸಿಕ್ಯೂಷನ್ ಗೆ ಅನಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಮರು ಅರ್ಜಿ ಸಲ್ಲಿರುವ ಕುರಿತು ಪ್ರತಿಕ್ರಿಯಿಸಿ ‘ಈ ವಿಚಾರದಲ್ಲಿ ಕೂಡ ರಾಜ್ಯಪಾಲರು ತಾರತಾಮ್ಯ ತೋರುತ್ತಿದ್ದಾರೆ’ ಎಂದು ಸಚಿವ ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

Key words: Misuse , Raj Bhavan, Central Government, Minister, Chaluvarayaswamy

Tags :
central government.Chaluvarayaswamy.ministerMisuseRaj Bhavan.
Next Article