ಮಿಜೋರಾಂ ವಿಧಾನಸಭಾ ಚುನಾವಣಾ ಫಲಿತಾಂಶ: 26 ಕ್ಷೇತ್ರಗಳಲ್ಲಿ ZPM ಮುನ್ನಡೆ
12:13 PM Dec 04, 2023 IST
|
prashanth
ಮೀಜೋರಾಂ, ಡಿಸೆಂಬರ್ 04, 2023 (www.justkannada.in): ಮಿಜೋರಾಂ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತದ್ದು, ಜೆಡ್‌ಪಿಎಂ 26, ಎಂಎನ್‌ಎಫ್ 11, ಕಾಂಗ್ರೆಸ್ 1, ಬಿಜೆಪಿ 2ರಲ್ಲಿ ಮುನ್ನಡೆ ಸಾಧಿಸಿದೆ.
40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಯಲ್ಲಿ 21 ಸ್ಥಾನ ಪಡೆದವರು ಅಧಿಕಾರದ ಗದ್ದುಗೆ ಏರುತ್ತಾರೆ. ರಾಜ್ಯದಲ್ಲಿ 8.57 ಲಕ್ಷ ಮತದಾರರಿದ್ದು, ಶೇಕಡ 80ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 18 ಮಹಿಳೆಯರು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಎಂಎನ್‌ಎಫ್, ಜೆಡ್‌ಪಿಎಂ ಮತ್ತು ಕಾಂಗ್ರೆಸ್ 40 ಸ್ಥಾನಗಳಲ್ಲೂ ಸ್ಪರ್ಧಿಸಿದ್ದರೆ, ಬಿಜೆಪಿ 13 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
Key words: Mizoram assembly –election-results- ZPM -leads - 26 constituencies.
Next Article