ಅನ್ನಭಾಗ್ಯದ ಅಕ್ಕಿಯಿಂದ ಮಂತ್ರಾಕ್ಷತೆ : ಡಿಕೆ ಶಿವಕುಮಾರ್ ಹೇಳಿಕೆಗೆ ಶಾಸಕ ಅಶ್ವಥ್ ನಾರಾಯಣ್ ಕಿಡಿ.
11:01 AM Jan 08, 2024 IST
|
prashanth
ಬೆಂಗಳೂರು,ಜನವರಿ,8,2024(www.justkannada.in): ಅನ್ನಭಾಗ್ಯದ ಅಕ್ಕಿಯಿಂದ ಮಂತ್ರಾಕ್ಷತೆ ನೀಡಲಾಗುತ್ತಿದೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಕಿಡಿ ಕಾರಿದ್ದಾರೆ.
ಈ ಕುರಿತು ಮಾತನಾಡಿದ ಅಶ್ವಥ್ ನಾರಾಯಣ್, ರಾಮನಗರ ಜಿಲ್ಲೆಯಲ್ಲೂ ಮಂತ್ರಾಕ್ಷತೆ ನೀಡುವ ಕೆಲಸವಾಗುತ್ತಿದೆ. ಡಿಕೆ ಶಿವಕುಮಾರ್ ಹೇಳಿಕೆ ಕೀಳು ಮಟ್ಟದ ಹೇಳಿಕೆ. ಧರ್ಮವನ್ನು ಅಗೌರವಿಸೋದು ಸರಿಯಲ್ಲ. ಭಗವಂತನನ್ನು ಪೂಜಿಸುವವರು ಈ ರೀತಿ ಹೇಳಿಕೆ ನೀಡಬಾರದು. ಡಿಕೆ ಶಿವ ಕುಮಾರ್ ಕೂಡಲೇ ಕ್ಷಮೆಯಾಚಿಸಿ ಗೌರವದಿಂದ ನಡೆದುಕೊಳ್ಳಲಿ. ನಿಮ್ಮಗೌರವಕ್ಕೆ ಧಕ್ಕೆ ತರುವ ಹೇಳಿಕೆ ನೀಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Key words: MLA -Ashwath Narayan - DK Shivakumar- statement
Next Article