ಡಿಕೆ ಸುರೇಶ್ ಅವರ ಪ್ರತ್ಯೇಕ ದೇಶ ಹೇಳಿಕೆ ಸಮರ್ಥಿಸಿಕೊಂಡ ಶಾಸಕ ನರೇಂದ್ರಸ್ವಾಮಿ.
ಮೈಸೂರು,ಫೆಬ್ರವರಿ,2,2024(www.justkannada.in): ಸಂಸದ ಡಿ.ಕೆ.ಸುರೇಶ್ ನೀಡಿರುವ ಪ್ರತ್ಯೇಕ ದೇಶ ಹೇಳಿಕೆಯನ್ನ ಶಾಸಕ ನರೇಂದ್ರ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ನರೇಂದ್ರ ಸ್ವಾಮಿ, ರಾಜ್ಯಕ್ಕೆ ಅನ್ಯಾಯವಾಗಿದೆ. ಅದರ ವಿರುದ್ಧ ಧ್ವನಿ ಎತ್ತಿದ್ದ ಏಕೈಕ ಗಂಡು ಡಿಕೆ ಸುರೇಶ್.ಅನ್ಯಾಯವಾಗಿರುವುದನ್ನು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದರಲ್ಲಿ ನನಗೆ ಯಾವ ತಪ್ಪು ಕಾಣುತ್ತಿಲ್ಲ. ಭಾವನಾತ್ಮಕ ಆಕ್ರೋಶ ಬಂದಾಗ ಆ ರೀತಿಯ ಪದ ಬಂದಿರುವುದು ಸಹಜ. ನರೇಂದ್ರ ಮೋದಿ, ಬಿಜೆಪಿಯಿಂದ ಈ ರಾಜ್ಯಕ್ಕೆ ಅನ್ಯಾಯವಾಗಿದೆ. ಅದನ್ನು ಯಾವ ಸಂಸದನು ಪ್ರಶ್ನೆ ಮಾಡಲಿಲ್ಲ. ಪ್ರಶ್ನೆ ಮಾಡಿರುವುದು ಡಿ.ಕೆ ಸುರೇಶ್ ಮಾತ್ರ. ಯಾಕೆ ಆ ಪ್ರಶ್ನೆ ಎತ್ತಿದರು ಎಂಬುದು ಈ ಚರ್ಚೆಯಾಗಬೇಕು ಎಂದು ಹೇಳಿದರು.
ಕೆರಗೋಡು ಧ್ವಜ ವಿವಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ನರೇಂದ್ರ ಸ್ವಾಮಿ, ಆಡಳಿತಾತ್ಮಕವಾಗಿಯು ಕೆಲವು ಲೋಪವಾಗಿದೆ. ಅದನ್ನ ಕೆಲವರು ಪ್ರಚೋದಕಾರಿಯಾಗಿ ಬಳಸುತ್ತಿದ್ದಾರೆ. ನಮಗೆ ರಾಷ್ಟ್ರ ಧ್ವಜ ಮಾತ್ರ ಮುಖ್ಯ. ಧ್ವಜ ಕಂಬದಲ್ಲಿ ಭಗವಧ್ವಜ ಯಾಕೆ ಹಾಕಲು ಬಿಟ್ಟರು.ಎಲ್ಲಿ ಲೋಪವಾಗಿದೆ. ಇದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಶಾಂತಿ ಸಭೆ ನಡೆಸಬೇಕಿದೆ. ಶಾಂತಿ ಸಭೆ ಮಾಡಲು ಸದ್ಯಕ್ಕೆ ಕಾಲ ಪಕ್ವವಾಗಿಲ್ಲ. ಶೀಘ್ರದಲ್ಲಿ ಶಾಂತಿ ಸಭೆ ಮಾಡುತ್ತೇವೆ ಎಂದರು.
ನಮಗು ಹಿಂದೂ ಧರ್ಮ, ದೇವರ ಬಗ್ಗೆ ಭಕ್ತಿ ಇದೆ. ನಾವು ಕೂಡ ಪೂಜೆ ಮಾಡಿಯೇ ಮನೆಯಿಂದ ಹೊರ ಬರುವುದು. ನಾವು ಇವರಿಂದ ಹಿಂದುತ್ವದ ಪಾಠ ಕಲಿಯಬೇಕಿಲ್ಲ ಎಂದು ಶಾಸಕ ನರೇಂದ್ರ ಸ್ವಾಮಿ ಹೇಳಿದರು.
Key words: MLA- Narendra Swamy –defended- DK Suresh's- separate country -statement.