HomeBreaking NewsLatest NewsPoliticsSportsCrimeCinema

ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಗೆ ಲೀಗಲ್ ನೋಟಿಸ್ ಜಾರಿ ಮಾಡಿದ ಶಾಸಕ ಶ್ರೀವತ್ಸ

10:58 AM Aug 21, 2024 IST | prashanth

ಮೈಸೂರು,ಆಗಸ್ಟ್,21,2024 (www.justkannada.in): ಸುದ್ದಿ ಗೋಷ್ಠಿಯೊಂದರಲ್ಲಿ ಕನಿಷ್ಠ ಪದ ಬಳಕೆ ಮಾಡಿ ನಿಂದಿಸಿದ್ದ ಆರೋಪದ ಮೇಲೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಿರುದ್ದ ಬಿಜೆಪಿ ಶಾಸಕ ಶ್ರೀವತ್ಸ ಮಾನನಷ್ಟ ಮೊಕದ್ದಮೆ ಹಾಕಲು ಮುಂದಾಗಿದ್ದು ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ.

ಕೇಜ್ರೀವಾಲ್ ತರ ಜೈಲಿನಲ್ಲಿ ಕೂತು ಆಡಳಿತ ಮಾಡವ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಹುದು ಎಂದು ಶಾಸಕ ಶ್ರೀವತ್ಸ ಹೇಳಿಕೆ ಕೊಟ್ಟಿದ್ದರು.  ಶ್ರೀವತ್ಸ ಅವರ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಲಕ್ಷ್ಮಣ್ ಅವರು ನಿಂದಿಸಿದ್ದರು ಎನ್ನಲಾಗಿದೆ. ತಾಕತ್ತಿದ್ದರೆ, ನಿಮ್ಮ ವಂಶಸ್ಥರಿಗೆ ನೀನು ಹುಟ್ಟಿದ್ದರೇ ಜೈಲಿಗೆ ಹಾಕಿಸು ನೋಡೋಣ ಎಂದು ಏಕವಚನದಲ್ಲಿ ಲಕ್ಷ್ಮಣ್ ಹರಿಹಾಯ್ದಿದ್ದರು.

ಇದೀಗ  ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಮುಂದಾಗಿರುವ  ಶಾಸಕ ಶ್ರೀವತ್ಸ ಅವರು ಲಕ್ಷ್ಮಣ್ ಅವಹೇಳನಕಾರಿ ಹೇಳಿಕೆ ಖಂಡಿಸಿ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ವಕೀಲ ವಿ.ರವಿಕುಮಾರ್ ಮೂಲಕ ನೋಟೀಸ್ ಜಾರಿ ಮಾಡಿದ್ದಾರೆ.

Key words: MLA, Srivatsa, legal notice,Congress spokesperson, M. Laxman

Tags :
Congress spokespersonlegal noticeM LaxmanMLASrivatsa
Next Article