For the best experience, open
https://m.justkannada.in
on your mobile browser.

ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ- ‘ಕೈ’ ಅಭ್ಯರ್ಥಿ ಮರಿತಿಬ್ಬೇಗೌಡ

06:12 PM May 28, 2024 IST | prashanth
ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ  ‘ಕೈ’ ಅಭ್ಯರ್ಥಿ ಮರಿತಿಬ್ಬೇಗೌಡ

ಮೈಸೂರು,ಮೇ,28,2024 (www.justkannada.in):  ಕಳೆದ ನಾಲ್ಕು ಚುನಾವಣೆಗಳಿಗಿಂತ ಈ ಬಾರಿ  ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ ಎಂದು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ  ಹೇಳಿದರು.

ಇಂದು ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ,  ಮೈತ್ರಿ ಅಭ್ಯರ್ಥಿ ವಿವೇಕಾನಂದಗೆ ಶಿಕ್ಷಣ ಕ್ಷೇತ್ರದಲ್ಲಿ ಗಂಧಗಾಳಿ ಗೊತ್ತಿಲ್ಲ. ಯಾರನ್ನೋ ತಂದು ನಿಲ್ಲಿಸಿದ್ದಾರೆ, ಅವರಲ್ಲೇ ಒಮ್ಮತವಿಲ್ಲ. ಶ್ರೀಕಂಠೇಗೌಡರ ಬೆಂಬಲಿಗರ ಸಪೋರ್ಟ್ ಸಂಪೂರ್ಣ ನನಗಿದೆ ಎಂದರು.

ನಾನು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವುದರಿಂದಲೇ ನಾಲ್ಕು ಬಾರಿ ಗೆದ್ದು ಬಂದಿರುವುದು. ನನ್ನ ಬಗ್ಗೆ ಕೆಲವರು ಇಲ್ಲ ಸಲ್ಲದ ಆರೋಪ ಮಾಡಬಹುದು ಅದು ನಿರಾಧಾರ. ಶಿಕ್ಷಕರರು ನನ್ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ಕೂಡ ಇದೆ. ಹಾಗಾಗಿ ಈ  ಬಾರಿ ಅತ್ಯಧಿಕ ಮತಗಳ ಅಂತರದಲ್ಲಿ ಗೆದ್ದು ಬರುವ ಸಂಪೂರ್ಣ ವಿಶ್ವಾಸ ಇದೆ ಎಂದು ಮರಿತಿಬ್ಬೇಗೌಡ ತಿಳಿಸಿದರು.

Key words: MLC, Election, confident, Marithibbe Gowda

Tags :

.