For the best experience, open
https://m.justkannada.in
on your mobile browser.

ವಿಧಾನಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಜವರಾಯಿಗೌಡ ಸ್ಪರ್ಧೆ.

12:55 PM Jun 03, 2024 IST | prashanth
ವಿಧಾನಪರಿಷತ್ ಚುನಾವಣೆ  ಜೆಡಿಎಸ್ ಅಭ್ಯರ್ಥಿಯಾಗಿ ಜವರಾಯಿಗೌಡ ಸ್ಪರ್ಧೆ

ಬೆಂಗಳೂರು, ಜೂನ್,3,2024 (www.justkannad.in):  ವಿಧಾನಸಭೆಯಿಂದ ವಿಧಾನಪರಿಷತ್‌ ಗೆ ನಡೆಯುವ ಚುನಾವಣೆಗೆ  ಜೆಡಿಎಸ್‌‍ ಅಭ್ಯರ್ಥಿಯಾಗಿ ಟಿ.ಎನ್‌.ಜವರಾಯಿಗೌಡ ಅವರು ಸ್ಪರ್ಧಿಸಿದ್ದಾರೆ.

ವಿಧಾನಪರಿಷತ್ ಚುನಾವಣೆಗೆ  ಇಂದು ಜೆಡಿಎಸ್ ಅಭ್ಯರ್ಥಿಯಾಗಿ ಜವರಾಯಿಗೌಡ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ  ಹಾಜರಿದ್ದರು.ಜೆಡಿಎಸ್‌‍ನ ಶಾಸಕಾಂಗ ಕಚೇರಿಗೆ ಆಗಮಿಸಿದ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಹಲವು ಶಾಸಕರು ಜವರಾಯಿಗೌಡರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದರು.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕುಪೇಂದ್ರ ರೆಡ್ಡಿ ಫಾರೂಕ್ ಆಯ್ಕೆ ಬಗ್ಗೆ ಚರ್ಚೆಯಾಗಿತ್ತು ಆದರಲ್ಲೂ ಸಂಕಷ್ಟದ ಕಾಲದಲ್ಲಿ ಫಾರೂಕ್ ನೆರವಾಗಿದ್ದಾರೆ.  ಜವರಾಯಿ ಗೌಡ ಅಭ್ಯರ್ಥಿಯಾಗುವುದರಿಂದ ಕಾರ್ಯಕರ್ತರಿಗೆ ಅನುಕೂಲ. ಹೀಗೆ ಫಾರೂಕ್ ಅವರೇ ಹೇಳಿದ್ದಾರೆ.  ಪಕ್ಷ ಕಷ್ಟ ಕಾಲದಲ್ಲಿದೆ. ಈಗ ಜವರಾಯಿ ಗೌಡ ಸೂಕ್ತ ಅಭ್ಯರ್ಥಿ. ಈ ಬಗ್ಗೆ ಹೆಚ್.ಡಿ ದೇವೇಗೌಡರ ಜೊತೆ ಕುಪೇಂದ್ರ ರೆಡ್ಡಿ, ಫಾರೂಕ್ ಮಾತನಾಡಿದ್ದಾರೆ ಎಂದರು.

Key words: MLC, Election,  Javarai Gowda, JDS candidate

Tags :

.