ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಭೋಜೇಗೌಡಗೆ ಗೆಲುವು.
ಮೈಸೂರು,ಜೂನ್,6,2024 (www.justkannada.in): ನೈರುತ್ಯ ಶಿಕ್ಷಕರ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಜೆಡಿಎಸ್ ಅಭ್ಯರ್ಥಿ ಭೋಜೇಗೌಡ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣ ಮುಕ್ತಾಯವಾಗಿದ್ದು, ಮೊದಲ ಪ್ರಾಶಸ್ತ್ಯ ಮತದಲ್ಲೇ 5267 ಮತಗಳ ಭಾರಿ ಅಂತರದಿಂದ ಎಸ್.ಎಲ್.ಭೋಜೇಗೌಡ ಗೆಲುವು ಸಾಧಿಸಿದ್ದಾರೆ. ಒಟ್ಟು ಚಲಾವಣೆ ಆಗಿದ್ದು 19479 ಮತಗಳು, ಕುಲಗೆಟ್ಟ ಮತಗಳ ಸಂಖ್ಯೆ 821, ಸಿಂಧು ಮತಗಳು 18, 658,
9,3330 ಖೋಟಾ ನಿಗಧಿಯಾಗಿತ್ತು. 9829 ಮತಗಳಿಗೆ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಭೋಜೇಗೌಡ ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ 4562 ಮತಗಳನ್ನ ಪಡೆದು ಸೋಲನುಭವಿಸಿದರು.
ನೈರುತ್ಯ ಪದವೀಧರರ ಕ್ಷೇತ್ರ ಮತ ಎಣಿಕೆ ನಡೆಯುತ್ತಿದ್ದು ಇದುವರೆಗೂ 14 ಸಾವಿರ ಮತಗಳ ಎಣಿಕೆಯಾಗಿದೆ. ಮೈತ್ರಿ ಅಭ್ಯರ್ಥಿ ಧನಂಜಯ ಸರ್ಜಿ ಗೆ 6693 ಮತಗಳನ್ನ ಪಡೆದರೇ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಗೆ 3054 ಮತಗಳನ್ನ ಪಡೆದಿದ್ದಾರೆ. ಆಯನೂರು ಮಂಜುನಾಥ್ 2397 ಮತಗಳನ್ನ ಪಡೆಯುವ ಮೂಲಕ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
Key words: MLC Election, JDS candidate, Bhoje Gowda, win