For the best experience, open
https://m.justkannada.in
on your mobile browser.

ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದು ನಮಗೂ ಅವಕಾಶ ಮಾಡಿಕೊಡಿ - ಮರಿತಿಬ್ಬೇಗೌಡರಿಗೆ ಕೆ.ಸಿ ಪುಟ್ಟಸಿದ್ದಶೆಟ್ಟಿ ಮನವಿ.

02:43 PM May 06, 2024 IST | prashanth
ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದು ನಮಗೂ ಅವಕಾಶ ಮಾಡಿಕೊಡಿ   ಮರಿತಿಬ್ಬೇಗೌಡರಿಗೆ ಕೆ ಸಿ ಪುಟ್ಟಸಿದ್ದಶೆಟ್ಟಿ ಮನವಿ

ಮೈಸೂರು,ಮೇ,6,2024 (www.justkannada.in): ಈ ಬಾರಿ ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ನಮಗೂ ಅವಕಾಶ ಮಾಡಿಕೊಡಿ. ನನ್ನ‌ ಪರವಾಗಿ ನಿಂತು ಗೆಲುವಿಗೆ ಸಹಕರಿಸಿ ಎಂದು ಮರಿತಿಬ್ಬೇಗೌಡರಿಗೆ  ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ ಪುಟ್ಟಸಿದ್ದಶೆಟ್ಟಿ ಮನವಿ ಮಾಡಿದರು.

ಮುಂದಿನ ತಿಂಗಳು ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ  ವಿಚಾರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟ್ಟಸಿದ್ದಶೆಟ್ಟಿ, ನಾನು 1986 ರಿಂದ 2012 ರವರೆಗೆ ಶಿಕ್ಷಕರ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕಳೆದ 24 ವರ್ಷಗಳಿಂದಲೂ ಶಿಕ್ಷಕರ ಕ್ಷೇತ್ರವನ್ನ ಪ್ರತಿನಿಧಿಸುತ್ತಾ ಬಂದಿರುವ ಮರಿತಿಬ್ಬೇಗೌಡರು ನಮ್ಮ ಬೆಂಬಲ ಸಹಕಾರದೊಂದಿಗೆ ಇಲ್ಲಿವರೆಗೂ ಗೆದ್ದು ಬಂದರು. ಈ ಬಾರಿ ತಾವು ಸ್ಪರ್ಧೆಯಿಂದ ಹಿಂದೆ ಸರಿದು ನಮಗೊಂದು ಅವಕಾಶ ಮಾಡಿಕೊಡಿ. ನನ್ನ‌ ಪರವಾಗಿ ನಿಂತು ನನ್ನ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಈ‌ 24 ವರ್ಷಗಳಲ್ಲಿ 4 ಬಾರಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಶಿಕ್ಷಕರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮರಿತಿಬ್ಬೇಗೌಡರು ವಿಫಲರಾಗಿದ್ದಾರೆ. ತಾವು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡುವಾಗ ನಮ್ಮ ಭಾವಚಿತ್ರ ಬಳಸಿಕೊಂಡು ಗೆದ್ದಿದ್ದಾರೆ. ಈಗ ಅವರು ಪಕ್ಷದಿಂದ ಪಕ್ಕಕ್ಕೆ ಪಲ್ಲಟನ ಮಾಡಿ ಕಾಂಗ್ರೆಸ್ ಸೇರಿದ್ದಾರೆ. ನೀವು ಕಳೆದ 24 ವರ್ಷಗಳಿಂದ ಮಾಡಿದ ಕೆಲಸ ಅಷ್ಟಕಷ್ಟೇ ಬೇರೆಯವರಿಗೆ ಅವಕಾಶ ಮಾಡಿಕೊಡಿ. ಇನ್ನು ಎಷ್ಟು ವರ್ಷಗಳು ತಾವೇ ಸ್ಪರ್ಧೆ ಮಾಡಬೇಕು.? ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು ಎಂದು  ಮಾಜಿ ಪರಿಷತ್ ಸದಸ್ಯ ಪುಟ್ಟಸಿದ್ದಶೆಟ್ಟಿ ಆಗ್ರಹಿಸಿದರು.

Key words: MLC, Election, Marithibbegowda, KC Puttasiddashetty

Tags :

.