For the best experience, open
https://m.justkannada.in
on your mobile browser.

ಬಿಜೆಪಿ -ಜೆಡಿಎಸ್ ಮೈತ್ರಿಯಾದರೂ ಪುಟ್ಟಣ್ಣ ಅವರ ಗೆಲುವು ನೂರಕ್ಕೆ ನೂರು ನಿಶ್ಚಿತ: ಸಿಎಂ ಸಿದ್ದರಾಮಯ್ಯ

06:09 PM Jan 30, 2024 IST | prashanth
ಬಿಜೆಪಿ  ಜೆಡಿಎಸ್ ಮೈತ್ರಿಯಾದರೂ ಪುಟ್ಟಣ್ಣ ಅವರ ಗೆಲುವು ನೂರಕ್ಕೆ ನೂರು ನಿಶ್ಚಿತ  ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜನವರಿ 30,2024(www.justkannada.in):  ಬಿಜೆಪಿ -ಜೆಡಿಎಸ್ ಸೋಲುತ್ತೇವೆ ಎಂಬ ಭಯದಿಂದಲೇ ಮೈತ್ರಿ ಮಾಡಿಕೊಂಡಿದ್ದಾರೆ.  ಮೈತ್ರಿ ಮಾಡಿಕೊಂಡಿದ್ದರೂ ಕೂಡ ಪುಟ್ಟಣ್ಣ ಅವರು ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪುಟ್ಟಣ್ಣ ಅವರಿಂದ ನಾಮಪತ್ರ ಸಲ್ಲಿಕೆಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪುಟ್ಟಣ್ಣ ವಿಧಾನಸಭಾ ಚುನಾವಣೆಗೆ ನಿಲ್ಲಲು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಜೀನಾಮೆ ಕೊಟ್ಟಿದ್ದ ಕ್ಷೇತ್ರವಿದು. ಉಪಚುನಾವಣೆಗೆ ಐದನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. ಹಿಂದೆಯೂ  ಬಿಜೆಪಿ, ಜೆಡಿಎಸ್ ಸ್ಪರ್ಧೆ ಮಾಡಿದ್ದರೂ ಆದರೂ ಬಿಜೆಪಿ, ಜೆಡಿಎಸ್ ನವರನ್ನು ಸೋಲಿಸಿ ಪುಟ್ಟಣ್ಣ ಗೆದ್ದಿದ್ದರು.  ಸತತವಾಗಿ ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರದಿಂದ ಗೆಲ್ಲಬೇಕೆಂದರೆ ಶಿಕ್ಷಕರ ಬೆಂಬಲವನ್ನು ಪಡೆದಿದ್ದು,ಅವರ ಮನಸ್ಸನ್ನು ಗೆದ್ದಿದ್ದಾರೆ. ಹಾಗಾಗಿ ಅವರನ್ನು ಶಿಕ್ಷಕರು ಒಪ್ಪಿದ್ದಾರೆ ಎಂದರು.

ಜೆಡಿಎಸ್ - ಬಿಜೆಪಿ ಜನರಿಗೆ ಪ್ರಚೋದನೆ ನೀಡಿ ಗಲಾಟೆ ಶಾಂತಿ ಕದಡಿದ್ದಾರೆ.

ಮಂಡ್ಯ ಘಟನೆಯ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿಯವರು ಪತ್ರಿಕಾಗೋಷ್ಠಿ ನಡೆಸಿ ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರೇ ಪ್ರಚೋದನೆ  ಮಾಡಿ ಗಲಾಟೆ ಮಾಡಿಸಿದ್ದಾರೆ. ಜೆಡಿಎಸ್ - ಬಿಜೆಪಿ ಜನರಿಗೆ ಪ್ರಚೋದನೆ ನೀಡಿ ಗಲಾಟೆ ಶಾಂತಿ ಕದಡಿದ್ದಾರೆ. ಕುಮಾರಸ್ವಾಮಿ ಹಾಗೂ ಬಿಜೆಪಿ ತಪ್ಪು ಎನ್ನುವುದು ಸ್ಪಷ್ಟವಾಗಿದೆ.  ಪಂಚಾಯತಿಯಲ್ಲಿ ಧ್ವಜಸ್ತಂಭದ ಮೇಲೆ ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸಿ ಎಂದು ಅನುಮತಿ ನೀಡಲಾಗಿದೆ.  ಈ ಬಗ್ಗೆ ಮುಚ್ಚಳಿಕೆಯನ್ನು ಅವರು ಬರೆದುಕೊಟ್ಟಿದ್ದಾರೆ. ಅದರೊಂದಿಗೆ ಯಾವುದೇ ಪಕ್ಷದ, ಧರ್ಮದ ಧ್ವಜವನ್ನು ಹಾರಿಸಬಾರದು ಎಂದೂ ಕೂಡು ತಿಳಿಸಲಾಗಿದೆ. ಆದರೆ ಇವರು ಭಗವಧ್ವಜ ಹಾರಿಸಿದ್ದಾರೆ. ಅದರಿಂದ ಅಶಾಂತಿ ನಿರ್ಮಾಣವಾಗುವಂತೆ ಮಾಡಿದ್ದಾರೆ. ಇದರ ಪರವಾಗಿ ಬಂದಿರುವವರು ಹೆಚ್.ಡಿ.ಕುಮಾರಸ್ವಾಮಿ, ಸಿ.ಟಿ.ರವಿಯವರು. ತಪ್ಪು ಯಾರದ್ದು ಹಾಗಾದರೆ ಎಂದು ಪ್ರಶ್ನಿಸಿದರು.

ENGLISH SUMMARY...

Despite BJP-JDS alliance, Puttanna's win is 100%: Chief Minister Siddaramaiah

Bengaluru, January 30:Chief Minister Siddaramaiah said that BJP-JDS alliance is due to the fear of defeat. He expressed confidence that Puttanna will win 100% despite the alliance.

He was speaking to the media today after the submission of nomination papers by Puttanna, candidate for the Bengaluru teachers' constituency.

This constituency is where Puttanna had resigned from South Teachers' Constituency to contest for assembly elections. He is contesting the by-election for the fifth time. Even though BJP and JDS had contested in the past, Puttanna won by defeating BJP and JDS. To win from the teachers' constituency four times in a row, he has got the support of the teachers and has also won their hearts. So the teachers will support him, he said.

JDS-BJP instigated the people and disturbed peace

Speaking about former CM , H.D. Kumaraswamy holding a press conference regarding the Mandya incident the CM said that H.D. Kumaraswamy himself has provoked and created a ruckus. JDS-BJP instigated the people and disturbed the peace. It is clear that Kumaraswamy and BJP are wrong. National flag or Kannada flag has been allowed to be hoisted on the flagpole by the Panchayat. Along with that, it has also been informed that the flag of any party or religion should not be hoisted. But they have hoisted the Bhagavadhwaja and It has created unrest. HD Kumaraswamy and CT Ravi have come in favour of this. The CM asked who is at fault?

Key words: MLC-election-Puttanna- victory -100% - CM Siddaramaiah.

Tags :

.